ನಿಮ್ಮ ಮನೆಯಲ್ಲಿ ಮನಿಪ್ಲ್ಯಾಂಟ್ ಗಿಡ ಇದಿಯಾ…? ಹಾಗಾದ್ರೆ ಅದನ್ನ ಈ ದಿಕ್ಕಿನಲ್ಲಿಡಿ..!
ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಬೇಕಾಬಿಟ್ಟಿ ಎಲ್ಲೆಂದರಲ್ಲಿ ಇಟ್ಟಿರುತ್ತೇವೆ. ವಾಸ್ತು ಶಾಸ್ತ್ರ ಪ್ರಕಾರವಾಗಿ ಒಂದೊಂದು ಗಿಡವನ್ನು ಮನೆಯಲ್ಲಿ ಅಥವಾ ಆಫೀಸ್‌ನಲ್ಲಿ ಇಡಲು ಅದರದ್ದೇ ಆದಂತಹ ಒಂದೊಂದು ದಿಕ್ಕು ಇರುತ್ತದೆ..
ಸರಿಯಾದ ಜಾಗದಲ್ಲಿ ವಾಸ್ತು ಪ್ರಕಾರವಾಗಿ ಗಿಡಗಳನ್ನು ಇಟ್ಟರೆ ಅದರಿಂದ ಹಲವಾರು ರೀತಿಯ ಲಾಭಗಳಿವೆ. ಆದರೆ ತಪ್ಪಾದ ದಿಕ್ಕಿನಲ್ಲಿ ಇಟ್ಟರೆ ಲಾಭದ ಬದಲು ನಷ್ಟವಾಗುವ ಸಾಧ್ಯತೆ ಇರುತ್ತದೆ. ಮನೆಯಲ್ಲಿ ಮನಿಪ್ಲ್ಯಾಂಟ್ ಗಿಡಗಳನ್ನು ಬೆಳೆಯುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಹೆಚ್ಚಾಗುತ್ತದೆ. ಮನಿ ಪ್ಲ್ಯಾಂಟ್ ಅನ್ನು ಈಶಾನ್ಯ ದಿಕ್ಕಿನಲ್ಲಿಟ್ಟರೆ ಅದು ನಕಾರಾತ್ಮಕ ಎಂದು ಕೆಲವರು ಹೇಳುತ್ತಾರೆ. ಈಶಾನ್ಯ ದಿಕ್ಕಿನಲ್ಲಿ ಮನಿಪ್ಲ್ಯಾಂಟ್ ಗಿಡ ನೆಟ್ಟರೆ ಹಣ ಹೆಚ್ಚಾಗುವ ಬದಲು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ.. ಈ ದಿಕ್ಕಿನಲ್ಲಿ ಗಿಡ ನೆಟ್ಟರೆ ಹಣದ ಜೊತೆಗೆ ಮನೆಯ ಜನರ ಶಾಂತಿ ನೆಮ್ಮದಿ ಹಾಗೂ ಆರೋಗ್ಯ ಕೂಡ ಹಾಳಾಗುವ ಸಂಭವ ಹೆಚ್ಚಾಗಿರುತ್ತದೆ. ಮನಿಪ್ಲ್ಯಾಂಟ್ ಗಿಡ ಇಡಲು ಸೂಕ್ತ ಜಾಗ ಎಂದರೆ ಅದು ಆಗ್ನೇಯ ದಿಕ್ಕು. ಇಲ್ಲಿ ಗಿಡ ಇಟ್ಟರೆ ಶುಭ ಎಂದು ಹೇಳಲಾಗುತ್ತದೆ.
Comments