ನೀವು ಕರೆ ಮಾಡಿರುವ ಚಂದದಾರರು ಬೇರೆ ಕರೆಯಲ್ಲಿ ನಿರತರಾಗಿದ್ದಾರೆ..! ಈ ಧ್ವನಿ ಯಾರದ್ದು ಗೊತ್ತಾ..?



ಈಗಿನ ಪೀಳಿಗೆಯಲ್ಲಿ ಪೋನ್ ಬಳಸದೇ ಇರುವವರೆ ಇಲ್ಲ ಅನ್ನಿಸುತ್ತದೆ. ಪ್ರತಿಯೊಬ್ಬರ ಬಳಿಯೂ ಕೂಡ ಪೋನ್ ಇದ್ದೆ ಇರುತ್ತದೆ. ಪ್ರತಿಯೊಬ್ಬರು ಕೂಡ ತಮ್ಮ ತಮ್ಮ ಪ್ರೀತಿ ಪಾತ್ರರೊಂದಿಗೆ ಗಂಟೆಗಟ್ಟಲೆ ಮಾತಾಡುತ್ತಾ ಕಾಲ ಕಳೆಯುತ್ತಾರೆ.
ಆದರೆ ಕೆಲವೊಮ್ಮೆ ಮೊಬೈಲ್ ನಲ್ಲಿ ನೆಟ್ ವರ್ಕ್ ಇಲ್ಲದೆ ನೀವು ಕರೆ ಮಾಡುತ್ತಿರುವ ಚಂದದಾರರು ವ್ಯಾಪ್ತಿ ಪ್ರದೇಶದಲ್ಲಿ ಸಿಗುತ್ತಿಲ್ಲ ಅಂತಾನೋ ಅಥವಾ ಸದ್ಯಕ್ಕೆ ಸ್ವಿಚ್ ಆಫ್ ಮಾಡಲಾಗಿದೆ ಅಂತಾನೋ ಅಥವಾ ನೀವು ಕರೆ ಮಾಡಿರುವ ಚಂದದಾರರು ಬೇರೆ ಕರೆಯಲ್ಲಿ ನಿರತರಾಗಿದ್ದಾರೆ ಅಂತ ಕೇಳಿಸುತ್ತದೆ. ಆದರೆ ಆ ಧ್ವನಿ ಯಾರದು ಇರಬಹುದು ಅಂತ ಯೋಚನೆ ಮಾಡಿದ್ದೀರಾ.. ಕೆಲವೊಮ್ಮೆ ನೀವು ಕೂಡ ಅಂದುಕೊಂಡಿರುತ್ತೀರಾ.. ಯಾರದಪ್ಪ ಈ ಧ್ವನಿ ಅಂತ.. ಈ ಧ್ವನಿ ಮರಾಠಿ ಮಹಿಳೆಯದು. ಆಕೆಯ ಹೆಸರು ಮೇಘನಾ ಎರ್ನಾಡೆ. ಈಕೆ ಒಬ್ಬಳು ಮಿಮಿಕ್ರಿ ಆರ್ಟಿಸ್ಟ್ ,ಹಲವಾರು ಕಾರ್ಟೂನ್ ಕಾರ್ಯಕ್ರಮಗಳಿಗೆ ಧ್ವನಿಯನ್ನು ನೀಡಿದ್ದಾರೆ.
Comments