ಚಿನ್ನ, ಬೆಳ್ಳಿ ಕೊಳ್ಳಲು ಬಯಸುವವರಿಗೆ ಸಿಹಿಸುದ್ದಿ ..!

ಚಿನ್ನ, ಬೆಳ್ಳಿ ಕೊಂಡು ಕೊಳ್ಳಲು ಬಯಸುವವರಿಗೆ ಸಿಹಿಸುದ್ದಿ. ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ತಲಾ 10 ಗ್ರಾಂಗೆ ರೂ. 280 ಇಳಿಕೆಯಾಗಿದ್ದು, ಬೆಳ್ಳಿ ತಲಾ 10 ಗ್ರಾಂಗೆ ಬೆಲೆ ಕೆ.ಜಿಗೆ ರೂ. 555 ರಂತೆ ಕಡಿಮೆಯಾಗಿದೆ. ಹೆಚ್ಚಾಗಿದ್ದ ಚಿನ್ನದಬೆಲೆಯಲ್ಲಿ ಕೊಂಚ ಇಳಿಮುಖ ಖಂಡಿದೆ. ಚಿನ್ನ ಬೆಳ್ಳಿ ಕೊಳ್ಳಲು ಇದೆ ಸರಿಯಾದ ಸಮಯ ಎನ್ನಲಾಗಿದೆ.
ಬೆಂಗಳೂರಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 28673 ಇದೆ ಹಾಗೂ ಶುದ್ಧ ಚಿನ್ನದ ಬೆಲೆ 30,143 ರೂ. ಇದೆ. ಇನ್ನು ಬೆಳ್ಳಿಯ ಬೆಲೆಯಲ್ಲೂ ಕೂಡ ಇಳಿಕೆಯಾಗಿದ್ದು ಬೆಂಗಳೂರಲ್ಲಿ ಪ್ರತಿ ಕೆಜಿಗೆ 39,793 ಇದೆ. ಜಾಗತಿಕ ಪೇಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಮತ್ತು ಸ್ಥಳೀಯ ಚಿನ್ನಾಭರಣ ವರ್ತಕರಿಂದ ಬೇಡಿಕೆ ಕಡಿಮೆ ಆಗಿದ್ದರಿಂದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ಮತ್ತಷು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
Comments