ನಿಮ್ಮ ಮನೆಯಲ್ಲಿ ಹೆಣ್ಣು ಮಗು ಇದ್ಯಾ..? ಹಾಗಾದ್ರೆ ಹೊಡಿತು ಅನ್ಕೊಳ್ಳಿ ಜಾಕ್'ಪಾಟ್..!
ದೇಶದೆಲ್ಲೆಡೆ ಅನೇಕ ಕಡೆ ಲಿಂಗಾನುಪಾತ ಇದೆ. ಹೆಣ್ಣು ಮಕ್ಕಳ ಭ್ರೂಣ ಹತ್ಯೆಯು ಕೂಡ ನಡೆಯುತ್ತಿದೆ,ಹಾಗಾಗಿ ಇದನ್ನ ತಪ್ಪಿಸಲು ಹಾಗೂ ಲಿಂಗಾನುಪಾತದ ನಡುವಿನ ಅಂತರವನ್ನು ಕಡಿಮೆಗೊಳಿಸುವುದು ಮತ್ತು ಹೆಣ್ಣುಮಗುವಿನ ಶಿಕ್ಷಣ ಮತ್ತು ವೃತ್ತಿಪರ ಗುರಿಗಳನ್ನು ಪಡೆಯುವುದಕೋಸ್ಕರವಾಗಿ ಇಡೀ ದೇಶದಲ್ಲಿ ‘ಆಕ್ಸಿ ಮಹಿಳಾ ಶಿಶು ಅಭಿವೃದ್ಧಿ ಕಾರ್ಯಕ್ರಮ’ ದಡಿಯಲ್ಲಿ ಹೆತ್ತವರು ಹೆಣ್ಣು ಮಗುವಿನ ಜನನವನ್ನು ನೊಂದಾಯಿಸಿದಲ್ಲಿ ಮಗುವಿನ ಹೆಸರಿನಲ್ಲಿ 11 ಸಾವಿರ ರೂಪಾಯಿಗಳ ನಿಶ್ಚಿತ ಠೇವಣಿ (ಎಫ್ಡಿ) ಇಡುವುದಾಗಿ ಓಕ್ಸಿ ಸಂಸ್ಥೆಯು ತಿಳಿಸಿದೆ.
ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಸ್ವತಂತ್ರಗೊಳಿಸಲು ಈ ಯೋಜನೆಯನ್ನು ರೂಪಿಸಲಾಗಿದ್ದು ‘ಪೋಷಕರ ಸಾಮಾಜಿಕ ಸ್ಥಾನಮಾನ ಅಥವಾ ಭೌಗೋಳಿಕ ಇತ್ಯಾದಿಗಳ ತಾರತಮ್ಯವನ್ನು ಮೀರಿ ಎಲ್ಲರಿಗೂ ಈ ಸೌಲಭ್ಯ ನೀಡಲಾಗುವುದು’ ಓಕ್ಸಿ ಸಂಸ್ಥೆಯು ತಿಳಿಸಿದೆ.ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಈ ನಿಶ್ಚಿತ ಠೇವಣಿ ಮೊತ್ತವನ್ನು ತೆಗೆದುಕೊಳ್ಳಬಹುದು. ಈ ಹಣವನ್ನು ಅವರ ವಿದ್ಯಾಭ್ಯಾಸ ಅಥವಾ ಅವರ ವೃತ್ತಿಪರ ಗುರಿ ಸಾಧನೆಗೆ ಬಳಸಬಹುದು ಎಂದು ತಿಳಿಸಿದ್ದಾರೆ.1500 ನಗರಗಳ ಆಕ್ಸಿ ಹೆಲ್ತ್ ಕೇರ್ ನಲ್ಲಿ ಸುಮಾರು 2 ಲಕ್ಷ ಕೇಂದ್ರಗಳಿವೆ, ಕಂಪನಿಯು 1.5 ಮಿಲಿಯನ್ ಹೆಲ್ತ್ ಕೇರ್ ನೆಟ್ವರ್ಕ್ ಪಾಲುದಾರರಿಂದ ಹಣವನ್ನುವನ್ನು ಈ ಯೋಜನೆಗಾಗಿ ಸಂಗ್ರಹಿಸುತ್ತಿದೆ.ಆಕ್ಸಿ ಹೆಲ್ತ್ ಕೇರ್ ನ ಈ ಯೋಜನೆಯು ಮೂರು ತಿಂಗಳ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯು ಆಕ್ಸಿ ಹೆಲ್ತ್ ಕೇರ್ ಅಪ್ಲಿಕೇಶನ್ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಹೆರಿಗೆಯಲ್ಲಿ ಹೆಣ್ಣು ಮಗು ಜನಿಸಿದರೆ, ಆಗ 11 ಸಾವಿರ ರೂಪಾಯಿ ಎಫ್ಡಿ ಅನ್ನು ಜನಿಸಿದ ಹೆಣ್ಣು ಮಗುವಿನ ಹೆಸರಿನಲ್ಲಿ ಇಡಲಾಗುತ್ತದೆ.ಇದು ಮಗುವಿನ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತದೆದ. 18 ವರ್ಷಗಳ ಪೂರ್ಣಗೊಂಡ ನಂತರ ಅವರು ಯಾವುದೇ ಹಸ್ತಕ್ಷೇಪವಿಲ್ಲದೆ ಅದನ್ನು ಬಳಸಬಹುದು.
Comments