ಗಣ್ಯರಿಗೆ ಟ್ರಾಫಿಕ್ ಫ್ರೀ ಮಾಡಿಕೊಡಲು ಆಂಬುಲೆನ್ಸ್ ತಡೆಯಬೇಡಿ : ಪೊಲೀಸರಿಗೆ ಪರಮೇಶ್ವರ್ ಖಡಕ್ ಸೂಚನೆ

08 Jul 2018 5:28 PM | General
1651 Report

ಗಣ್ಯ ವ್ಯಕ್ತಿಗಳ ಸಂಚಾರದ ಸಂದರ್ಭದಲ್ಲಿ ಆಯಂಬುಲೆನ್ಸ್ ವಾಹನಗಳು ಯಾವುದೇ ರೀತಿಯ ತೊಂದರೆಯಿಲ್ಲದೆ ಮುಕ್ತವಾಗಿ ಸಂಚರಿಸಲು ಅಗತ್ಯಕ್ರಮ ಕೈಗೊಳ್ಳಬೇಕೆಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೂಚಿಸಿದ್ದಾರೆ.

ಜಿ. ಪರಮೇಶ್ವರ್ ಪತ್ರದಲ್ಲಿ ಈ ರೀತಿ ಸೂಚಿಸಿದ್ದಾರ , ಬೆಂಗಳೂರು ಸೇರಿದಂತೆ ರಾಜ್ಯದ್ಯಂತ ನಾನು ಸಂಚರಿಸುವ ಮಾರ್ಗದಲ್ಲಿ ನನಗೆ ಶಿಷ್ಟಾಚಾರದಂತೆ ಟ್ರಾಫಿಕ್ ಫ್ರಿ ಸಂಚಾರ ಮಾಡುವ ಸಲುವಾಗಿ ಕೆಲವು ಬಾರಿ ಅಂಬುಲೆನ್ಸ್ ವಾಹನಗಳನ್ನು ತಡೆದು ನಿಲ್ಲಿಸಿರುವುದನ್ನು ನಾನು ಗಮನಿಸಿದ್ದೇನೆ. ನನಗೆ ಮತ್ತು ಇನ್ನಿತರ ವಿಐಪಿಗಳಿಗೆ ನೀಡಿರುವ ಶಿಷ್ಟಾಚಾರವನ್ನು ಬದಿಗೊತ್ತಿ, ಗಣ್ಯವ್ಯಕ್ತಿಗಳ ಸಂಚಾರ ಸಂದರ್ಭದಲ್ಲಿ ಆಂಬುಲೆನ್ಸ್ ವಾಹನಗಳು ಮುಕ್ತವಾಗಿ ಯಾವುದೇ ರೀತಿಯ ತೊಂದರೆಯಾಗದಂತೆ ಸಂಚರಿಸಲು ಅಗತ್ಯಕ್ರಮ ವಹಿಸಲು ಜಿ. ಪರಮೇಶ್ವರ್ ಅವರು ಪತ್ರದಲ್ಲಿ ಸೂಚಿಸಿದ್ದಾರೆ.

Edited By

Shruthi G

Reported By

Shruthi G

Comments