ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯ ರವಾನೆ..!

ಈಗಾಗಲೇ ಸಾಕಷ್ಟು ಜೀವಂತ ಹೃದಯಗಳನ್ನು ರವಾನಿಸಿರುವ ನಿದರ್ಶನಗಳಿವೆ. ಅದೇ ರೀತಿ ಇಂದು ಬೆಳಗ್ಗೆ ಮೈಸೂರಿನಿಂದ ಬೆಂಗಳೂರಿಗೆ ಜಿರೋ ಟ್ರಾಫಿಕ್‍ನಲ್ಲಿ ಹೃದಯವನ್ನು ರವಾನಿಸಲಾಯಿತು. ನಗರದ ಅಪೊಲೋ ಆಸ್ಪತ್ರೆಯಿಂದ ಹೃದಯವನ್ನು ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ರವಾನಿಸಲಾಯಿತು.
ಚಾಮುಂಡಿಬೆಟ್ಟದಲ್ಲಿ ಮೊನ್ನೆ ರಾತ್ರಿ ಸಂಭವಿಸಿದಂತಹ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದರು, ಹಿಂಬದಿ ಕುಳಿತಿದ್ದ ಯುವತಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಯುವತಿಯನ್ನು ನಗರದ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಈಕೆ ಬದುಕುಳಿಯುವ ಸಾಧ್ಯತೆ ಕ್ಷೀಣಿಸಿದ ಹಿನ್ನೆಲೆಯಲ್ಲಿ ಪೋಷಕರ ಮತ್ತು ಸಂಬಂಧಿಗಳ ಒಪ್ಪಿಗೆಯ ಮೇರೆಗೆ ಈಕೆಯ ಹೃದಯವನ್ನು ಮತ್ತೊಬ್ಬರಿಗೆ ಅಳವಡಿಸಲು ತೀರ್ಮಾನಿಸಿ ಇಂದು ಬೆಳಗ್ಗೆ ಮೈಸೂರಿನಿಂದ ಬೆಂಗಳೂರಿಗೆ ಹೃದಯವನ್ನು ರವಾನೆ ಮಾಡಲಾಯಿತು.
Comments