ಶಿಕ್ಷಣ ಮುಗಿಯುವವರೆಗೂ ಸಾಮಾಜಿಕ ಜಾಲತಾಣವನ್ನ ಬಳಸುವುದಿಲ್ಲ ಎಂದು ಪೋಷಕರ ಮೇಲೆ ಪ್ರಮಾಣ ಮಾಡಿದ ವಿದ್ಯಾರ್ಥಿಗಳು..!

ನಮ್ಮ ಪದವಿ ಪೂರ್ವ ಶಿಕ್ಷಣ ಮುಗಿಯುವವರೆಗೂ ಕೂಡ ಸಾಮಾಜಿಕ ಜಾಲತಾಣಗಳನ್ನು ಬಳಸುವುದಿಲ್ಲ ಅಂತಾ ವಿದ್ಯಾರ್ಥಿಗಳು ಪೋಷಕರ ಮೇಲೆ ಪ್ರಮಾಣ ಮಾಡಿರುವ ವಿಶೇಷ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿಯೇ ಪೋಷಕರ ಮೇಲೆ ಪ್ರಮಾಣ ಮಾಡಿದ್ದು, ಜೀವನದ ಗುರಿ ತಲುಪುವವರೆಗೆ ಸಾಮಾಜಿಕ ಜಾಲತಾಣವಾದ ವಾಟ್ಸಪ್, ಫೇಸ್ ಬುಕ್ ಬಳಸಲ್ಲ ಅಂತಾ ತಂದೆತಾಯಿಯ ಮೇಲೆ ಪ್ರತಿಜ್ಞೆಯನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಪರಿಚಯ ಮಾಡಿಕೊಂಡು ದುರುಪಯೋಗ ಮಾಡುವ ಹಲವುಗಳು ಘಟನೆಗಳನ್ನು ಕೇಳಿದ್ದೇವೆ, ನೋಡಿದ್ದೇವೆ. ಇತ್ತೀಚೆಗೆ ಗಡಿಭಾಗದ ಕೇರಳದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿವೆ. ಹಾಗಾಗಿ ನಾವು ಶಿಕ್ಷಣ ಮುಗಿಯುವವರೆಗೂ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವುದಿಲ್ಲ ಎಂದು ಪೋಷಕರ ಮೇಲೆ ಪ್ರಮಾಣ ಮಾಡಿದ್ದಾರೆ.
Comments