ಲಿಪ್ಸ್ಟಿಕ್ ಹಚ್ಚುವ ಮುನ್ನ ಈ ಟಿಪ್ಸ್ ಫಾಲೋ ಮಾಡಿ..
ಹೆಣ್ಣು ಮಕ್ಕಳಿಗೆ ತಮ್ಮ ಸೌಂದರ್ಯದ ಮೇಲೆ ಎಲ್ಲಿಲ್ಲದ ಪ್ರೀತಿ. ಮೇಕಪ್ ಗೆ ಅಂತ ಕನ್ನಡಿ ಮುಂದೆ ನಿಂತುಕೊಂಡರೆ ಸಾಕು ಟೈಮ್ ಹೋಗೋದೆ ಗೊತ್ತಾಗಲ್ಲ. ಮೇಕಪ್ ನಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸುವುದು ಲಿಪ್ ಸ್ಟಿಕ್
ಎಸ್..ಲಿಪ್ಸ್ಟಿಕ್ ಹಚ್ಚುವುದು ಇತ್ತಿಚಿಗೆ ಕಾಮನ್ ಆಗಿದೆ. ಪಾರ್ಟಿ, ಫಂಕ್ಷನ್ಗಳಿಗೆ ಹೋಗುವಾಗ ಅಟ್ರ್ಯಾಕ್ಟ್ ಲುಕ್ಗೆ ಆದಷ್ಟು ಡಾರ್ಕ್ ಬಣ್ಣದ ಲಿಪ್ಸ್ಟಿಕ್ ಆಯ್ಕೆ ಮಾಡಿಕೊಳ್ಳುತ್ತೇವೆ.ಲಿಫ್ ಸ್ಟಿಕ್ ಹಚ್ಚುವಾಗ ಕೆಲವೊಂದಿಷ್ಟು ರೂಲ್ಸ್ ಗಳನ್ನು ಫಾಲೋ ಮಾಡಬೇಕಾಗುತ್ತದೆ.
ತುಟಿಗಳು ಡ್ರೈ ಇರುವಂತೆ ನೋಡಿಕೊಳ್ಳಿ..
ಲಿಪ್ಸ್ಟಿಕ್ ಹಚ್ಚುವ ವೇಳೆಯಲ್ಲಿ ತುಟಿಗಳು ಡ್ರೈ ಇರಲಿ. ಮೇಕಪ್ ಮಾಡುವ ಸಮಯದಲ್ಲೆ ತುಟಿಗಳಿಗೆ ಸ್ವಲ್ಪ ಲಿಪ್ ಬಾಮ್ ಹಚ್ಚಿ, ನಿಮ್ಮ ಮುಖದ ಮೇಕಪ್ ಮುಗಿಯುವವರೆಗೆ ತುಟಿಯು ತೇವಾಂಶವನ್ನು ಹೀರಿಕೊಂಡು ಸಾಫ್ಟ್ ಆಗಿರುತ್ತದೆ. ನಂತರೆ, ಉಳಿದ ಲಿಪ್ ಬಾಮ್ನ್ನು ತೆಗೆದು, ಲಿಪ್ಸ್ಟಿಕ್ ಹಚ್ಚಿಬೇಕು.
ಸ್ಕಿನ್ ಟೋನ್ಗೆ ಮ್ಯಾಚ್ ಆಗುವ ಲಿಪ್ಸ್ಟಿಕ್ ಆರಿಸಿಕೊಳ್ಳಿ..
ನಿಮಗೆ ಇಷ್ಟವಾದ ಬಣ್ಣಕ್ಕಿಂತ ಸ್ಕಿನ್ ಟೋನ್ಗೆ ಹೊಂದುವ ಲಿಪ್ಸ್ಟಿಕ್ ಆಯ್ಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೇ ಲಿಪ್ಸ್ಟಿಕ್ ಬಣ್ಣ ನಿಮ್ಮ ಲುಕ್ನ್ನೇ ಹಾಳುಮಾಡುವ ಚಾನ್ಸ್ ಇರುತ್ತದೆ. ಹಾಗಾಗಿ ನಿಮ್ಮ ಲಿಪ್ಸ್ಟಿಕ್ ಶೇಡ್ ಆರಿಸಿಕೊಳ್ಳುವಾಗ ಗಮನವಿರಲಿ
ಡೆಡ್ ಸ್ಕಿನ್ಗಳನ್ನು ಕ್ಲೀನ್ ಮಾಡಿ..
ಡಾರ್ಕ್ ಲಿಪ್ಸ್ಟಿಕ್ ತುಟಿಗಳನ್ನು ಒಣಗಿಸುತ್ತವೆ. ಹಾಗಾಗಿ ಮೊದಲು ಸ್ವಲ್ಪ ಜೇನುತುಪ್ಪಕ್ಕೆ ಸಕ್ಕರೆ, ಕೊಬ್ಬರಿ ಎಣ್ಣೆ ಸೇರಿಸಿ ಈ ಮಿಶ್ರಣವನ್ನು ತುಟಿಗೆ ಹಚ್ಚಿ ನಿಧಾನವಾಗಿ ಉಜ್ಜಿ, ಇದರಿಂದ ಡೆಡ್ ಸ್ಕಿನ್ ಹೋಗಿ ತುಟಿಗಳು ಸಾಫ್ಟ್ ಆಗುತ್ತವೆ.
ಲಿಪ್ ಸ್ಟಿಕ್ ಹಚ್ಚುವಾಗ ಸ್ವಲ್ಪ ಎಚ್ಚರವಿರಲಿ.. ಸ್ವಲ್ಪ ಲಿಪ್ ಸ್ಟಿಕ್ ಹಾಳಾದರೂ ಇಡೀ ಮುಖದ ಅಂದವನ್ನೆ ಹಾಳುಮಾಡುತ್ತದೆ.
Comments