ಕೋಳಿ ಫಾರಂನಂತೆ ಈ ದೇಶದಲ್ಲಿ ಬೇಬಿ ಫಾರಂಗಳಿವೆಯಂತೆ..!?

ಸಾಮಾನ್ಯವಾಗಿ ನಾವು ಕೋಳಿ ಫಾರಂ ಮೇಕೆ ಫಾರಂಗಳನ್ನು ನೋಡಿರುತ್ತೇವೆ. ಆದರೆ ಇಲ್ಲಿ ಕೋಳಿ ಮೇಕೆಗಳನ್ನು ಚೆನ್ನಾಗಿ ಸಾಕಿ ಬಳಿಕ ಕಟುಕರಿಗೆ ಮಾರಾಟ ಮಾಡುತ್ತಾರೆ. ಆದರೆ ನೈಜೀರಿಯಾ ದೇಶದಲ್ಲಿ ಬೇಬಿ ಫ್ಯಾಕ್ಟರಿಗಳೇ ತಲೆ ಎತ್ತಿವೆಯಂತೆ.ಆಶ್ಚರ್ಯ ಅನಿಸಿದರೂ ಕೂಡ ಇದು ನಿಜ. ಮಕ್ಕಳನ್ನು ಹುಟ್ಟಿಸಿ ಅವುಗಳನ್ನು ಮಕ್ಕಳಿಲ್ಲದವರಿಗೆ ಮಾರಾಟ ಮಾಡುವ ದಂಧೆ ಎಂದರೆ ನಿಮಗೆ ಆಶ್ಚರ್ಯ ಅನಿಸಬಹುದು.
ಎಸ್… ನೈಜೀರೀಯ ದೇಶದಲ್ಲಿ ಮಕ್ಕಳನ್ನು ಹುಟ್ಟಿಸಿ ಮಾರಾಟ ಮಾಡುವಂತಹ ಬಹುದೊಡ್ಡ ದಂದೆ ನಡೆಯುತಿದೆ. ಈ ದಂದೆಯಲ್ಲಿ ಸಾಮಾನ್ಯವಾಗಿ ಬಳಸಿಕೊಳ್ಳುತ್ತಿರುವುದು ಅನಾಥ ಹಾಗೂ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಇಲ್ಲಿಗೆ ಕರೆತಂದು ಅವರಿಗೆ ಅನೈತಿಕವಾಗಿ ಗರ್ಭ ಧರಿಸುವಂತೆ ಮಾಡಿ ನಂತರ ಅವರಿಗೆ ಹುಟ್ಟಿದ ಮಕ್ಕಳನ್ನು ಮಕ್ಕಳಿಲ್ಲದವರಿಗೆ ಲಕ್ಷ ಲಕ್ಷ ರೂ ಹಣಕ್ಕಾಗಿ ಮಾರಾಟ ಮಾಡುವ ದಂದೆ ಎಗ್ಗಿಲ್ಲದೇ ನಡೆಯುತ್ತಿದೆ. ಸುಮಾರು 13 ರಿಂದ 18 ವರ್ಷದ ಯುವತಿಯರೇ ಈ ಕರಾಳ ಕೂಪಕ್ಕೆ ಬಲಿಯಾಗುತ್ತಿರುವ ಯುವತಿಯರಾಗಿದ್ದಾರೆ. ನೈಜೀರಿಯಾ ದೇಶದಲ್ಲಿ ಒಮ್ಮೆ ಗರ್ಭವತಿಯಾದರೆ ಯಾವುದೇ ಕಾರಣಕ್ಕೂ ಅಭಾರ್ಷನ್ ಮಾಡಿಸುವಂತಿಲ್ಲ, ಅಭಾರ್ಷನ್ ಮಾಡಿಸುವುದು ಇಲ್ಲಿ ಕಾನೂನು ರೀತಿಯ ಅಪರಾಧ.ಹಾಗಾಗಿ ಇಲ್ಲಿ ಹೆಚ್ಚು ಮಕ್ಕಳನನ್ನು ಹುಟ್ಟಿಸುವ ಪ್ಯಾಕ್ಟರಿಗಳು ಸೃಷ್ಟಿಯಾಗುತ್ತಿವೆ.
Comments