ನಮೋ ಆ್ಯಪ್ ಮೂಲಕ ಸಲ್ಲಿಸಿದ ಮನವಿಗೆ ಪ್ರಧಾನಿ ಕಚೇರಿಯಿಂದ ರೆಸ್ಪಾನ್ಸ್..!
ಕೇಂದ್ರ ಸರ್ಕಾರದಿಂದ ಈಗಾಗಲೇ ಸಾಕಷ್ಟು ಮಹಾತ್ವಾಕಾಂಕ್ಷೆ ಯೋಜನೆಗಳು ಜಾರಿಯಾಗಿವೆ. ಅದರಲ್ಲಿ ನಮೋ ಆ್ಯಪ್ ಕೂಡ. ನಮೊ ಆ್ಯಪ್ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೆ ಇದೆ.
ದೆಹಲಿಯಲ್ಲಿಯೇ ಕೂತು ಈ ನಮೋ ಆ್ಯಪ್ ಮೂಲಕವೇ ದೇಶದ ರೈತರ ಹಾಗೂ ಪಕ್ಷದ ಕಾರ್ಯಕರ್ತರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸುತ್ತಿರುತ್ತಾರೆ. ಈ ನಮೋ ಆ್ಯಪ್ ಚಾಲ್ತಿಗೆ ಬಂದಾಗ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಈ ಆ್ಯಪ್ ಕೇವಲ ಪ್ರಚಾರಕ್ಕೆ ಎಂದು ವಿಪಕ್ಷಗಳು ಲೇವಡಿ ಕೂಡ ಮಾಡಿದ್ದವು. ಆದರೆ ಇದೀಗ ಈ ಆ್ಯಪ್ ಮೂಲಕ ಸಲ್ಲಿಸಿದ ಮನವಿಯಿಂದ ಧಾರವಾಡ ತಾಲೂಕಿನ ಹೋಸ ದೇಗೂರ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾಗಿದೆ.ಎಸ್… ಈ ಗ್ರಾಮದ ರುದ್ರಪ್ಪ ಗಾಣೇಗೇರ ಸಲ್ಲಿಸಿದ ಮನವಿಗೆ ಪ್ರಧಾನಿ ಕಛೇರಿಯಿಂದ ರೆಸ್ಪಾನ್ಸ್ ಸಿಕ್ಕಿದೆ.ಈ ಗ್ರಾಮದ ಸುತ್ತಾ ಮುತ್ತಾ ಯಾವುದೇ ಒಳ್ಳೆಯ ಆಸ್ಪತ್ರೆ ಇಲ್ಲದ ಕಾರಣ ನಮೋ ಆ್ಯಪ್ ಮೂಲಕ ಆಸ್ಪತ್ರೆಗೆ ಅರ್ಜಿಯನನ್ನು ಸಲ್ಲಿಸಿದ್ದರು. ಈಗಾಗಲೇ ಆಸ್ಪತ್ರೆಯ ಕೆಲಸಗಳು ಕೂಡ ಶುರುವಾಗಿದೆ. ಗ್ರಾಮದ ಜನರು ರುದ್ರಪ್ಪ ಗಾಣೇಗೇರ ಮಾಡಿರುವ ಕೆಲಸದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.
Comments