ಎಚ್ಚರ: ಸೆಲ್ಫಿ ತೆಗೆದುಕೊಳ್ಳುವಾಗ ಬೆರಳು ತೋರಿಸಿದರೆ ಬ್ಯಾಂಕ್ ಖಾತೆಗೆ ಬೀಳಲಿದೆ ಕನ್ನ! ಹೇಗೆ ಅಂತೀರಾ..?

ಇತ್ತಿಚಿಗೆ ನಿಮಗೆ ಗೊತ್ತಿರುವ ಹಾಗೆ ಸೆಲ್ಫಿ ಕ್ರೇಜ್ ಎಲ್ಲೆಡೆ ಶುರುವಾಗಿದೆ. ಯಾರನ್ನು ನೋಡಿದರೂ ಕೈಯಲ್ಲಿ ಮೊಬೈಲ್ ಹಿಡಿದು ಸೆಲ್ಫಿಯನ್ನು ಕ್ಲಿಕ್ಲಿಸಿಕೊಳ್ಳುತ್ತಿರುತ್ತಾರೆ. ಆ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತಿರುತ್ತಾರೆ. ಸೆಲ್ಫಿ ಫೋಟೋ ತೆಗೆದು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡುವ ಮುನ್ನ ಇದನ್ನೊಮ್ಮೆ ಓದಿ.
ಸೆಲ್ಫಿ ತೆಗೆದುಕೊಳ್ಳುವಾಗ ಕೈಬೆರಳ ಮಾಹಿತಿ ಫೋಟೋದಲ್ಲಿ ದಾಖಲಾದರೆ ಅದರಿಂದ ಖದೀಮರು ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಈ ಕುರಿತು ಜಾಗೃತಿ ಮೂಡಿಸುವ ಹಾಗೂ ಎಚ್ಚರಿಸುವ ವಿಡಿಯೋವನ್ನು ಐಪಿಎಸ್ ಅಧಿಕಾರಿ ಐಜಿಸಿ ರೂಪಾ ಅವರು ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ. ಸೆಲ್ಫಿ ತೆಗೆಯುವಾಗ ವಿಕ್ಟರಿ ಮಾರ್ಕ್ ಗಾಗಿ ಎರಡು ತೋರು ಬೆರಳುಗಳನ್ನು ಇಂಗ್ಲಿಷ್ ಅಕ್ಷರ ವಿ ಆಕಾರದಲ್ಲಿ ತೋರಿಸುವುದು, ಡನ್ ಎಂದು ಹೆಬ್ಬಟ್ಟುಗಳನ್ನು ತೋರಿಸಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದ್ದಾರೆ. ಆಧುನಿಕ ತಂತ್ರಜ್ಞಾನದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಾವು ಅಪ್ ಲೋಡ್ ಮಾಡಿದ ಬೆರಳುಗಳ ಮೂಲಕ ಬೆರಳಿನ ಗುರುತುಗಳನ್ನು ಪತ್ತೆ ಹಚ್ಚಿ ತಂತ್ರಜ್ಞಾನಗಳ ನೆರವಿನಿಂದ ಅದೇ ರೀತಿಯ ಬೆರಳಚ್ಚನ್ನು ಮರು ಸೃಷ್ಟಿಸಿ ಖಾತೆಗಳಿಗೆ ಕನ್ನ ಹಾಕಬಹುದು ಎನ್ನುವುದು ತಿಳಿಸಿದ್ದಾರೆ.
Comments