ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ...!!
ಬೆಂಗಳೂರು: ಕಳೆದ ತಿಂಗಳಿನಿಂದ ಕರ್ನಾಟಕದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ, ಇನ್ನು ಮುಂದಿನ 48 ಗಂಟೆಗಳ ಕಾಲವೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸ್ವಷ್ಟಪಡಿಸಿದೆ. ಇದೊಂದೇ ತಿಂಗಳಿನಲ್ಲಿ ಅಂದರೆ ಜೂನ್ ತಿಂಗಳಿನಲ್ಲಿ ಇದುವರೆಗೆ ಒಟ್ಟು 1000 ಮಿಮೀ ಮಳೆಯಾಗಿದೆ. ಕರ್ನಾಟಕದ ಕರಾವಳಿ, ಕೊಂಕಣ ಸೀಮೆ, ಗೋವಾ, ಕೇರಳಗಳಲ್ಲಿ ನಿರಂತರ ಮಳೆಯಾಗಿದೆ
ದೇಶ ಎಲ್ಲೆಡೆಯೂ ಮಳೆಯಾಗುವ ಸಂಭವ ಕಡಿಮೆ ಏಕೆಂದರೆ ನೈರುತ್ಯ ಮುಂಗು ಅಷ್ಟೇನು ಚುರುಕಾಗಿಲ್ಲ ಎಂಬ ಕಾರಣ. ಉಳಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಕೊಂಚ ಮಳೆಯಾಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ. ಗುಜರಾತ್, ರಾಜಸ್ತಾನಗಳಲ್ಲೂ ಸಾಕಷ್ಟು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಗಳು ತಿಳಿಸಿವೆ. ಪಶ್ಚಿಮ ಕರಾವಳಿಯಲ್ಲಿ ಈ ವರ್ಷ ಸಾಧಾರಣ ಮಳೆಯಷ್ಟೇ ಕಂಡುಬರಲಿದೆ. ಉತ್ತರ ಬಾರತದ ಹಲವು ರಾಜ್ಯಗಳಲ್ಲಿ ಇಂದು ಮಳೆಯಾಗುವ ಸಂಭವವಿದೆ.
Comments