ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಅ.ದೇವೇಗೌಡ

29 Jun 2018 6:01 PM | General
436 Report

ವಿಧಾನ ಪರಿಷತ್​ಗೆ ಬೆಂಗಳೂರು ಪದವೀಧರರ ಕ್ಷೇತ್ರದಿಂದ ನೂತನವಾಗಿ ಚುನಾಯಿತರಾಗಿರುವ ಅ. ದೇವೇಗೌಡ ಅವರು ಪ್ರಮಾಣವಚನ ಸ್ವೀಕರಿಸಿದರು.

ಇಂದು  ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಅ.ದೇವೇಗೌಡ ಅವರಿಗೆ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿಯವರು ಅಧಿಕಾರ ಮತ್ತು ಗೌಪ್ಯತೆ ಪ್ರಮಾಣವಚನ ಬೋಧಿಸಿದರು. ಭಗವಂತನ ಹೆಸರಿನಲ್ಲಿ ಅ.ದೇವೇಗೌಡ ಅವರು ಪ್ರಮಾಣವಚನ ಸ್ವೀಕರಿಸಿದರು. ನೂತನ ಸದಸ್ಯರಿಗೆ ಸಭಾಪತಿ ಹೊರಟ್ಟಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

Edited By

Shruthi G

Reported By

Shruthi G

Comments