ನೀವು ಕೆಲಸ ಹುಡುಕುತ್ತಿದೀರಾ? ಹಾಗಾದ್ರೆ ಚಿಂತಿಸ್ಬೇಡಿ ಇಲ್ಲಿದೆ ಬಂಪರ್ ಆಫರ್..!!

ಟೆಲಿಕಾಂ ಕ್ಷೇತ್ರದ ದೈತ್ಯ ರಿಲಾಯನ್ಸ್ ಜಿಯೋ ತನ್ನ ಕ್ಷೇತ್ರ ವಿಸ್ತರಣೆಗಾಗಿ ಬಂಪರ್ ನೇಮಕಾತಿಗೆ ಮುಂದಾಗಿದೆ. ಜಿಯೋ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. 2847 ಹುದ್ದೆಗಳಿಗೆ ಜಿಯೋ ಸೂಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಸೇಲ್ಸ್, ಬ್ಯುಸಿನೆಸ್ ಡೆವಲಪ್ಮೆಂಟ್, ಇಂಜಿನಿಯರ್, ಕಸ್ಟಂ ಸರ್ವಿಸ್, ಆಪರೇಷನ್, ಫೈನಾನ್ಸ್, ಕಾರ್ಪೋರೇಟ್ ಸರ್ವಿಸ್, ಸಪ್ಲೈ ಚೈನ್, ಪ್ರೊಡಕ್ಟ್ ಮ್ಯಾನೇಜ್ಮೆಂಟ್, ಹೆಚ್ ಆರ್ ವಿಭಾಗಕ್ಕೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈಗ್ಲೇ ಅರ್ಜಿ ಸಲ್ಲಿಸಬಹುದು. ರಿಲಾಯನ್ಸ್ ಜಿಯೋದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು careers.jio.com ಗೆ ಹೋಗಬೇಕು. ನಂತರ ಸರ್ಚ್ ಜಾಬ್ ಸೆಕ್ಷನ್ ನಲ್ಲಿ ಕ್ಲಿಕ್ ಮಾಡಬೇಕು. ಅಲ್ಲಿ ಯಾವ ಯಾವ ಹುದ್ದೆ, ವಿದ್ಯಾರ್ಹತೆ, ವೇತನ ಸೇರಿದಂತೆ ಎಲ್ಲದರ ವಿವರವಿದೆ. ಹುದ್ದೆ ಮೇಲೆ ಕ್ಲಿಕ್ ಮಾಡಿ ಅರ್ಹರು ಅರ್ಜಿ ಸಲ್ಲಿಸಬಹುದು.
Comments