ಅಬಬ್ಬ ಟೆಕ್ನಾಲಜೀ ಎಷ್ಟು ಮುಂದುವರೆದಿದೆ ಎಂಬುದಕ್ಕೆ ಇದೆ ಸಾಕ್ಷಿ..!!

ಕ್ರೆಡಿಟ್ ಸ್ಕೋರ್ ಎಂಬ ಪದ ಹೆಜ್ಜೆಹೆಜ್ಜೆಗೂ ಎದುರಾಗಿ ಬ್ಯಾಂಕ್ ಮತ್ತಿತರ ಕಡೆ ಸಾಲ ಮಾಡಲು ಮುಂದಾಗುವವರಿಗೆ ಅದರ ಮಹತ್ವ ಗೊತ್ತಾಗಿರುತ್ತದೆ. ಭಾರತದಲ್ಲಿ ಕ್ರೆಡಿಟ್ ಸ್ಕೋರ್ ಅಳೆಯುವ ಸಾಕಷ್ಟು ಕಂಪೆನಿಗಳು ಇದ್ದು, ಹಲವು ಆರ್ಥಿಕ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಂಡು, ಗ್ರಾಹಕರಿಗೆ ಕ್ರೆಡಿಟ್ ಸ್ಕೋರ್ಸ್, ಸಾಲದ ವರದಿ, ತಿಂಗಳ ವರದಿಗಳನ್ನು ಬೇಡಿಕೆಗೆ ಅನುಗುಣವಾಗಿ ನೀಡುತ್ತವೆ.
ಇದೀಗ Wishfin ಎಂಬ ಕಂಪೆನಿಯೊಂದು ಒಂದು ಹೆಜ್ಜೆ ಮುಂದೆ ಹೋಗಿ, ಟ್ರಾನ್ಸ್ ಯೂನಿಯನ್- ಸಿಬಿಲ್ ಜತೆ ಸೇರಿ ವಾಟ್ಸ್ ಆಪ್ ಮೂಲಕ ಕ್ರೆಡಿಟ್ ಸ್ಕೋರ್ಸ್ ನೀಡಲಿದೆ. ಇ.ಎಂ.ಐ ಗಳು ಮತ್ತು ಕ್ರೆಡಿಟ್ ಕಾರ್ಡ್ ಬಾಕಿ, ನಿಮ್ಮ ಸಾಲದ ಇತಿಹಾಸ ಇತರ ಅಂಶಗಳು ಆಧರಿಸಿ ಕ್ರೆಡಿಟ್ ಸ್ಕೋರ್ ನೀಡಲಾಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಸಾಲದ ವಿಚಾರದಲ್ಲಿ ಅನುಕೂಲ ಮಾಡಿಕೊಡುತ್ತದೆ. ಕೆಲ ಬ್ಯಾಂಕ್ ಗಳು ಹೆಚ್ಚು ಕ್ರೆಡಿಟ್ ಸ್ಕೋರ್ ಇರುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತವೆ.
ವಾಟ್ಸ್ ಆಪ್ ನಲ್ಲಿ ಕ್ರೆಡಿಟ್ ಸ್ಕೋರ್ ತಿಳಿಯುವುದ್ದೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..
- ವಾಟ್ಸ್ ಆಪ್ ನಲ್ಲಿ ಕ್ರೆಡಿಟ್ ಸ್ಕೋರ್ ತಿಳಿಯುವುದಕ್ಕೆ ಒಂದೋ ಮಿಸ್ಡ್ ಕಾಲ್ ನೀಡಬೇಕು. ಅಥವಾ Wishfin ವೆಬ್ ಸೈಟ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಬೇಕು.
- ನಂತರ ನಿಮಗೊಂದು ಸೂಚನೆ ಬರುತ್ತದೆ. ಅದರ ಪ್ರಕಾರ ಮಾಹಿತಿಯನ್ನು ಫಿಲ್ ಮಾಡಬೇಕು. ಕ್ರೆಡಿಟ್ ರಿಪೋರ್ಟ್ ಹಾಗೂ ಹನ್ನೆರಡು ತಿಂಗಳ ಡೇಟ್ ಯಾವುದೇ ಶುಲ್ಕ ಇಲ್ಲದೆ ಈವರೆಗೆ ದೊರೆಯುತ್ತಿದೆ.
Comments