ಪ್ರಧಾನಿ ಮೋದಿಗೆ ವಿಜಯ್ ಮಲ್ಯ ಬರೆದ ರಹಸ್ಯ ಪತ್ರದಲ್ಲೇನಿದೆ..!?
ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ಪ್ರಧಾನಿ ಮೋದಿಗೆ ಸಾಲ ತೀರಿಸುವ ಬಗ್ಗೆ ಪತ್ರವೊಂದನ್ನು ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಕೇಂದ್ರ ಸರಕಾರ ನೂತನ ಕಾಯ್ದೆ ಅಡಿಯಲ್ಲಿ ವಿಜಯ್ ಮಲ್ಯ ಅವರನ್ನು 'ತಲೆಮರೆಸಿಕೊಂಡಿರುವ ಅಪರಾಧಿ' ಎಂದು ಘೋಷಿಸಲು ಜಾರಿ ನಿರ್ದೇಶನಾಲಯ (ಇಡಿ) ಮುಂದಾಗಿದೆ. ಇದೇ ವೇಳೆ, ಎಲ್ಲಾ ಬಾಕಿ ಸಾಲಗಳನ್ನು ಮರುಪಾವತಿಸಲು ಸಿದ್ಧ ಎಂದು ಲಂಡನ್‌ನಿಂದ ವಿಜಯ್ ಮಲ್ಯ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ನಾನು ಸಾಲವನ್ನು ತೀರಿಸುವುದಕ್ಕೆ ಸಿದ್ದನಾಗಿರುವೆ ಅಂತ ಹೇಳಿದ್ದಾರೆ ಎನ್ನಲಾಗಿದೆ.
Comments