ಅಮೆರಿಕ ಸಂಸತ್ ಪ್ರವೇಶಕ್ಕೆ ಭಾರತೀಯ ಮಹಿಳೆ ಸ್ಪರ್ಧೆ
ಭಾರತೀಯ ಮಹಿಳೆಯೊಬ್ಬರು ಅಮೆರಿಕದ ಸಿವಿಲ್ ಎಂಜಿನಿಯರ್ ಮತ್ತು ಮೇರಿಲ್ಯಾಂಡ್ ರಾಜ್ಯ ಪ್ರತಿನಿಧಿ ಅರುಣಾ ಮಿಲ್ಲರ್(53) ಸಂಸತ್‍ನ ಹೌಸ್ ಆಫ್ ರೆಪ್ರೆಸೆಂಟೇಟಿವ್ (ಪ್ರತಿನಿಧಿಗಳ ಸದನ) ಡೆಮೊಕ್ರಾಟಿಕ್ ಪಕ್ಷದಿಂದ ಚುನಾವಣೆ ಬಾಹುಳ್ಯದ ಮೇರಿಲ್ಯಾಂಡ್‌ನಿಂದ ಸ್ಪರ್ಧೆಗಿಳಿದ್ದಿದ್ದಾರೆ.
ವಾಷಿಂಗ್ಟನ್ ರಾಜ್ಯದಿಂದ ಪ್ರಮೀಳಾ ಜಯಪಾಲ್ ಈಗಾಗಲೇ ಅಮೆರಿಕ ಕಾಂಗ್ರೆಸ್‍ನ ಕೆಳ ಮನೆ ಪ್ರವೇಶಿಸಿದ್ದು, ಅರುಣಾ ಚುನಾಯಿತರಾದರೆ ಭಾರತ ಮೂಲದ ಎರಡನೇ ಮಹಿಳೆ ಸಂಸತ್ ಪ್ರವೇಶಿಸಿದಂತಾಗುತ್ತದೆ. ಹೈದರಾಬಾದ್‍ನಲ್ಲಿ ಜನಿಸಿದ ಅರುಣಾ ಏಳು ವರ್ಷವಿದ್ದಾಗಲೇ 1972ರಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ವಾಷಿಂಗ್ಟನ್‍ನ ಮೇರಿಲ್ಯಾಂಡ್ ಉಪನಗರದಿಂದ ಅವರು ಹೌಸ್ ಆಫ್ ರೆಪ್ರೆಸೆಂಟಿಟಿವ್‍ಗೆ ಪ್ರವೇಶಿಸಲು ಬಯಸಿದ್ದು, ಚುನಾಯಿತರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
Comments