ಹೊಸದಾಗಿ ಮದುವೆಯಾಗಿದ್ದೀರ..! ಹಾಗಿದ್ರೆ ಈ ಸಲಹೆಗಳನ್ನು ಪಾಲಿಸಿದರೆ ಬಾಳು ಬಂಗಾರ

ಮದುವೆ ಎಂಬುದು ಜೀವನದಲ್ಲಿ ಅಪೂರ್ಣವಾದ ಸಂಬಂಧವಾಗಿದೆ. ಜೀವನದಲ್ಲಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಭಾವನಾತ್ಮಕವಾಗಿ ಬೆರೆಯುವುದಕ್ಕೆ ಮದುವೆಯ ಸೂಕ್ತ ವೇದಿಕೆ, ಜೊತೆಗೆ ಹಣ ಸಂಪಾದಿಸಿ ಶ್ರೀಮಂತರಾಗುವುದು, ಹಾಗೆಯೇ ಜೊತೆಯಲ್ಲಿದ್ದುಕೊಂಡೇ ವೃದ್ಧಾಪ್ಯ ತಲುಪುವುದು ಹೀಗೆ ಎಲ್ಲವೂ ಕೂಡ ಮಾತು ಮಾತಲ್ಲೆ ನಡೆದಿರುತ್ತವೆ. ಇದೆಲ್ಲದರ ಜೊತೆಗೆ ಒಬ್ಬರಿಗೊಬ್ಬರು ಹಣಕಾಸು ಸಹಾಯ ಮಾಡುತ್ತಾ, ಕುಟುಂಬದ ಹಣಕಾಸಿನ ಅಗತ್ಯತೆಯ ಗುರಿಯನ್ನು ಸಾಧಿಸುವುದು ಕೂಡ ಅತಿ ಪ್ರಮುಖವಾದ ಅಂಶವಾಗಿರುತ್ತದೆ.
ಸಾಮಾನ್ಯವಾಗಿ ಹೊಸದಾಗಿ ಮದುವೆಯಾಗಿರುವ ದಂಪತಿಗಳು ತಮ್ಮ ಭವಿಷ್ಯದ ಹಣಕಾಸು ಜೀವನದ ಬಗ್ಗೆ ಯಾವುದೇ ರೀತಿಯ ಯೋಜನೆಗಳನ್ನು ಮಾತ್ರ ಹಾಕಿಕೊಳ್ಳದೆ ಸುತ್ತಾಟದಲ್ಲೆ ಕಾಲವನ್ನು ಕಳೆದು ಬಿಡುತ್ತಾರೆ. ಮುಂದಿನ ಭವಿಷ್ಯ ಚೆನ್ನಾಗಿ ಇರಬೇಕು ಎಂದರೆ ಈಗಿನಿಂದಲೆ ಸ್ವಲ್ಪ ಪ್ಲಾನ್ ಮಾಡಿಕೊಂಡರೆ ಒಳ್ಳೆಯದು. ಅದಕ್ಕಾಗಿ ಒಂದಿಷ್ಟು ಸಲಹೆಗಳು ಇಲ್ಲಿವೆ ಮುಂದೆ ಓದಿ
- ಹಣಕಾಸನ್ನು ಮಿತವಾಗಿ ಖರ್ಚು ಮಾಡಿ
- ಮೊದಲೇ ಬಜೆಟ್ ಫ್ಲಾನ್ ಮಾಡಿ
- ಅಕೌಂಟ್ ಗಳನ್ನು ತೆರೆಯಿರಿ
- ರಿಟೈರ್ ಮೆಂಟ್ ಫಂಡ್ ಬಗ್ಗೆ ಯೋಚಿಸಿರಿ
- ತಿಂಗಳ ಸಂಬಳದಲ್ಲಿ ಒಂದಿಷ್ಟು ದುಡ್ಡನ್ನು ತುರ್ತುನಿಧಿಯಾಗಿ ಇಟ್ಟುಕೊಳ್ಳಿ.
- ಉಳಿತಾಯ ಮತ್ತು ಹೂಡಿಕೆಯ ಮೇಲೆ ಗಮನವಿರಲಿ
- ಇನ್ಸೂರೆನ್ಸ್ ಮಾಡಿಸಿಕೊಳ್ಳಿ
ಈ ರೀತಿ ಮಾಡುವುದರಿಂದ ನಿಮ್ಮ ಸಂಸಾರದ ಆಯ-ವ್ಯಯದ ಜೊತೆಗೆ ,ನೀವು ಕೂಡ ನೆಮ್ಮದಿಯಿಂದ ಇರಬಹುದು.
Comments