ವರಮಹಾಲಕ್ಷ್ಮಿ ಹಬ್ಬಕ್ಕೆ ಸಿಕ್ತು ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗಿಫ್ಟ್..!

ಹಬ್ಬ ಅಂದರೆ ಸಾಕು ಹೆಣ್ಣು ಮಕ್ಕಳಿಗೆ ಏನೋ ಒಂಥರಾ ಖುಷಿ ಏನೋ ಒಂಥರಾ ಸಂಭ್ರಮ, ಹೊಸ ಬಟ್ಟೆ ತೊಟ್ಟು ಸಂಭ್ರಮ ಪಡೋದೆ ಹೆಣ್ಣು ಮಕ್ಕಳ ಕೆಲಸವಾಗಿ ಬಿಟ್ಟಿರುತ್ತದೆ. ಆದರೆ ಬಟ್ಟೆ ಬೆಲೆ ಗಗನಕ್ಕೆ ಹೋಗುತ್ತಿದೆ ಏನ್ ಮಾಡೋದು ಅಂತಾ ಚಿಂತೆ ಮಾಡಿತ್ತಿದ್ದೀರಾ.. ಚಿಂತೆ ಬಿಟ್ಟು ಮುಂದೆ ಓದಿ..
ಹೇಗಿದ್ದರು ವರಮಹಾಲಕ್ಷ್ಮಿ ಹಬ್ಬ ಹತ್ತಿರ ಬರುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೊಂದು ವಿಶೇಷ ಕೊಡುಗೆ ನೀಡಲು ಇದೀಗ ಮುಂದಾಗಿದೆ. ಹಬ್ಬದ ಸಂದರ್ಭದಲ್ಲಿ 10,000 ರೂ. ಮೌಲ್ಯದ ಮೈಸೂರು ರೇಷ್ಮೆ ಸೀರೆಯನ್ನು 4,500 ರೂ. ಗಳಿಗೆ ಮಾರಾಟ ಮಾಡಲು ನಿರ್ಧರ ಮಾಡಲಾಗಿದೆ. ಪ್ರವಾಸೋದ್ಯಮ ಮತ್ತು ರೇಷ್ಮೆ ಖಾತೆ ಸಚಿವ ಸಾ ರಾ ಮಹೇಶ್ ಈ ವಿಚಾರವನ್ನು ತಿಳಿಸಿದ್ದು, ವಿಶ್ವ ವಿಖ್ಯಾತ ಮೈಸೂರು ರೇಷ್ಮೆ ಸೀರೆ ಜನಸಾಮಾನ್ಯರಿಗೂ ದೊರಕುವಂತೆ ಮಾಡಲು ಆರಂಭಿಕ ಬೆಲೆಗೆ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ದರ ದುಬಾರಿ ಆಗಿರುವ ಕಾರಣ ಮೈಸೂರು ರೇಷ್ಮೆ ಸೀರೆ ನಮಗೆ ಕೈಗೆಟಕುವುದಿಲ್ಲವೆಂಬ ಭಾವನೆ ಹಲವರಿಗಿದೆ. ಈಗ ಕಡಿಮೆ ಬೆಲೆಗೆ ಮಾರಾಟ ಮಾಡಲು ತೀರ್ಮಾನಿಸಿರುವುದರಿಂದ ಖರೀದಿಸಲು ಅನುಕೂಲವಾಗಲಿದೆ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.
Comments