ಹಸಿದವರ ಪಾಲಿಗೆ ಅನ್ನದಾತ- ಬಡವರ ಪಾಲಿನ ಭಾಗ್ಯದಾತ

ಭಾರತೀಯ ಸಂಸ್ಕೃತಿಯಲ್ಲಿ ರೈತರನ್ನಷ್ಟೇ ಅಲ್ಲ.., ಅನ್ನ ಹಾಕುವ ಮಹನೀಯರು ಯಾರೇ ಆಗಿರಲೀ ಅವ್ರನ್ನ ಅನ್ನದಾತ ಎಂದೇ ಕರೆಯುತ್ತೇವೆ. ಹೌದು.., ಸಮಾಜದಲ್ಲಿರುವ ಬಹುತೇಕರು ತಮ್ಮ ಕುಟುಂಬವನ್ನ ತಾವು ಸಲುಹುದೇ ಕಷ್ಟವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸಿ ಅವ್ರುಗೆ ಹೊಟ್ಟೆ ತುಂಬಿಸುವುದು ಇದೆಯಲ್ಲಾ ಇದು ನಿಜಕ್ಕೂ ದೊಡ್ಡತನವೇ ಸರಿ.
ಸಮಾಜದಲ್ಲಿ ಈ ರೀತಿಯ ದೊಡ್ಡತನದ ದಿಟ್ಟ ವ್ಯಕ್ತಿಗಳು ಸಿಗುವುದು ವಿರಳ. ಅಂತಹ ಕೆಲವರಲ್ಲಿ ಹೈದ್ರಾಬಾದ್‍ನ ಅಜರ್ ಕೂಡ ಒಬ್ಬರು. ಇವರು ಬಡವರ ಪಾಲಿನ ಭಾಗ್ಯದಾತರು.., ಹಸಿದವರ ಪಾಲಿನ ಅನ್ನದಾತರು. ಒಂದು ಕಾಲದಲ್ಲಿ ಅವ್ರಿಗೆ ಊಟವಿಲ್ಲದಿದ್ದರು ಬೇರೆಯವ್ರ ಹೊಟ್ಟೆ ತುಂಬಿಸುವ ಪುಣ್ಯದ ಕೆಲಸ ಮಾಡುತ್ತಿರುವವರು. ಹೌದು.., ಭಾರತದಲ್ಲಿ ಬಡವರ ಸಂಖ್ಯೆಗೇನೂ ಕಮ್ಮಿಯಿಲ್ಲ.., ಇಲ್ಲಿ ಊಟಕ್ಕೆ ಗತಿಯಿಲ್ಲದೇ ದಿನಂಪ್ರತಿ ನೂರಾರು ಜನರು ಸಾವಿಗೀಡಾಗುತ್ತಿದ್ದಾರೆ. ಕಡುಬಡವರಿಗೆಂದೇ ಸರ್ಕಾರದಿಂದ ನೂರಾರು ಯೋಜನೆಗಳೇನು ಜಾರಿಗೆ ಬರ್ತೀವೆ ಆದ್ರೆ ಅವು ಸೂಕ್ತ ಫಲಾನುಭಾವಿಗಳನ್ನು ತಲುಪಿತ್ತಿಲ್ಲ ಎನ್ನುವುದೇ ವಿಪರ್ಯಾಸ. ತಿಂದವನಿಗೆ ಗೊತ್ತಂತೆ ಬೆಲ್ಲದ ರುಚಿ ಏನು ಎಂದು.., ಹಾಗೇ ಹಸಿದವನಿಗೆ ಗೊತ್ತಂತೆ ಅನ್ನದ ಬೆಲೆ ಏನು ಎಂದು. ಈ ರೀತಿ ಅನ್ನದ ಬೆಲೆ ತಿಳಿದ ಅಜಾರ್‍ಗೆ ಹಸಿವಿನ ಬೆಲೆಯೂ ಗೊತ್ತಿತ್ತು. ಹಾಗಾಗಿಯೇ ಅವ್ರು ಹಸಿದವರಿಗೆ ಹೊಟ್ಟೆ ತುಂಬಿಸುವ ಕಾಯಕದಲ್ಲಿ ನಿರತರಾದ್ರು. ಬಡವರು ಹೊಟ್ಟೆ ತುಂಬಿದ ಮಾತುಗಳಿಗೆ ಮೌನಿಯಾದರು. ಇದೇ ಜೀವನದ ನಿಜವಾದ ಸಾರ್ಥಕತೆ ಎಂದು ತಿಳಿದು ಅದನ್ನು ಮುಂದುವರೆಸಿಕೊಂಡು ಬಂದರು.
ಈ 36 ವರ್ಷ ವಯಸ್ಸಿನ ಅಜರ್ ಮಕ್ಸುಸಿ ಹೈದ್ರಾಬಾದ್ ಮೂಲದವರು. ಇವ್ರು ಪ್ರತಿನಿತ್ಯ 100 ರಿಂದ 150 ಮಂದಿ ಪುರುಷರು, ಮಹಿಳೆಯರು, ಮಕ್ಕಳಿಗೆ ಊಟ ಹಾಕುತ್ತಾರೆ. ಹಾಗಂತ ಇವರೇನು ಶ್ರೀಮಂತರಲ್ಲ. ಬಡವರು ಅದರಲ್ಲೂ ಅನ್ನದ ಬೆಲೆ ತಿಳಿದವರು ಸಧ್ಯ ಹಸಿದವರ ಪಾಲಿಗೆ ಅನ್ನದಾತರಾಗಿರುವ ಅಜರ್.., ಓಲ್ಡ್ ಹೈದ್ರಾಬಾದ್ನ ದಬೀಪುರ ಫ್ಲೈ ಓವರ್ ಅಡಿಯಲ್ಲಿ ಕಳೆದ 3 ವರ್ಷಗಳಿಂದ ನಿರಾಶ್ರಿತರ ಹಸಿದ ಹೊಟ್ಟೆ ತುಂಬಿಸುತ್ತಿದ್ದಾರೆ. ‘‘ ಸ್ವತಃ ನನಗೆ ಹಸಿವು ಏನೆಂಬುದು ತಿಳಿದಿದೆ, ಯಾರು ಕೂಡ ಅಂತಹ ಪರಿಸ್ಥಿತಿಯನ್ನ ಎದುರಿಸಬಾರದೆಂಬುದು ನನ್ನ ಗುರಿ.’’ ಇದೇ ನನ್ನ ಈ ಸಾಧನೆಗೆ ಸ್ಫೂರ್ತಿ ಎನ್ನುತ್ತಾರೆ ಅಜರ್. ವಿಭಿನ್ನವಾಗಿ ಯೋಚಿಸುವ ಅಜರ್ ಮಕ್ಸುಸಿರ ಈ ಸಾಮಾಜಿಕ ಸೇವೆ ನಿಜಕ್ಕೂ ಇತರರಿಗೆ ಮಾದರಿಯಾಗಿದೆ. ಬಡವರಿಗೆ, ನಿರಾಶ್ರಿತರಿಗೆ ನೆರವು ಒದಗಿಸಿ ಸಮಾಜಸೇವೆ ಮಾಡುತ್ತಿರುವ ಇವರು ಇಡೀ ಸಮಾಜಕ್ಕೆ ಸ್ಫೂರ್ತಿಯಾಗಿದ್ದಾರೆ.
Comments