ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ : 6 ಬೋಗಿಯ ಮೆಟ್ರೋ ಸಂಚಾರ

ಬೆಂಗಳೂರು ನಮ್ಮ ಮೆಟ್ರೊ ಪ್ರಯಾಣಿಕರಿಗೆ ಸಿಹಿಸುದ್ದಿಯೊಂದನ್ನ ನೀಡಿದೆ, ಇಂದಿನಿಂದ ನಮ್ಮ ಮೆಟ್ರೋದಲ್ಲಿ ಮೂರು ಬೋಗಿಗಳನ್ನು ಅಳವಡಿಸಲಾಗಿದೆ. ಇಂದಿನಿಂದ 6 ಬೋಗಿಗಳ ಮೆಟ್ರೋ ರೈಲು ಸಂಚಾರವನ್ನು ಶುರುಮಾಡಲಿದೆ.
ಇಂದು ಸಂಜೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬೈಯಪ್ಪನಹಳ್ಳಿ ಸ್ಟೇಷನ್ ನಲ್ಲಿ 6 ಬೋಗಿಗಳ ಮೆಟ್ರೋ ರೈಲಿಗೆ ಚಾಲನೆಯನ್ನು ನೀಡಲಿದ್ದಾರೆ. ಬಳಿಕ ಅದೇ ರೈಲಿನಲ್ಲಿ ಮೆಜೆಸ್ಟಿಕ್ ಸ್ಟೇಷನ್ ವರೆಗೆ ಸಿಎಂ ಕುಮಾರಸ್ವಾಮಿ ಸಂಚಾರ ಮಾಡಲಿದ್ದಾರೆ. ಇನ್ನೂ, ಆರು ಬೋಗಿಗಳಲ್ಲಿ ಮೊದಲನೇ ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಸದ್ಯ ಮೆಟ್ರೊ ಬಳಿಯಿರುವ 50 ರೈಲುಗಳ ಪೈಕಿ ಒಂದು ರೈಲಿಗೆ ಬೆಮೆಲ್ ಸಂಸ್ಥೆ ನೀಡಿದ 3 ಬೋಗಿಗಳನ್ನು ಸೇರಿಸಿ 6 ಬೋಗಿಗಳನ್ನಾಗಿ ಪರಿವರ್ತನೆ ಮಾಡಲಾಗಿದೆ. 3 ಬೋಗಿಗಳ ರೈಲಿನಲ್ಲಿ 900 ಜನ ಸಂಚರಿಸುತ್ತಿದ್ದು, ಈಗ 6 ಬೋಗಿಗಳಾಗಿರುವುದರಿಂದ 1800 ಜನ ಸಂಚರಿಸಬಹುದಾಗಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದ್ದಾರೆ.
Comments