ಸೆಲ್ಫಿ ತೆಗೆದುಕೊಳ್ತಿದ್ದಿರಾ ಅದಕ್ಕೂಮೊದಲು ಇದನ್ನೊಮ್ಮೆ ಓದಿ..!

ಕೈಯಲ್ಲಿ ಸ್ಮಾರ್ಟ್‍ಫೋನ್ ಇದ್ರೆ ಎಲ್ಲರೂ ಸ್ಮಾರ್ಟ್ ಆಗೋಕೆ ನೋಡ್ತಾರೆ. ಜಗತ್ತೆ ಸ್ಮಾರ್ಟ್ ಆಗ್ತಿರುವಾಗ ಇಲ್ಲಿ ಸೆಲ್ಫಿಗೆ ಬರ ಇಲ್ಲ. ಸೆಲೆಬ್ರಿಟಿಗಳಿಂದ ಹಿಡಿದು ಚಿಕ್ಕ ಮಕ್ಕಳ ವರೆಗೂ ಸೆಲ್ಫಿಗಳದ್ದೇ ಕಾರುಬಾರು. ಸೆಲ್ಫಿ ಪ್ರಿಯರು ಸೆಲ್ಫಿಗಾಗಿ ಕೊಡೋ ಪೋಸ್‍ಗಳು ಹೇಗಿರುತ್ತೆ ಗೊತ್ತಾ..? ಕೆಲವರು ಸೆಲ್ಫಿ ತಗೊಳೊ ಜಾಗಗಳು ಹೇಗಿರುತ್ತೆ..? ಎಲ್ಲೆಲ್ಲಿ ಹೋಗಿ ಸೆಲ್ಫಿ ತಗೋತಾರೆ..? ಸೆಲ್ಫಿ ಹುಚ್ಚಾಟದಿಂದ ಏನೆಲ್ಲಾ ಅನಾಹುತಗಳಾಗುತ್ತೆ..?ನಾವು ಆಗಲೇ ಹೇಳಿದ್ದ ಹಾಗೆ ಜಗತ್ತಿನಲ್ಲಿರೋ ಪ್ರತಿಯೊಬ್ಬರು ಕೂಡ ಸೆಲ್ಫಿ ಪ್ರಿಯರೆ. ಪ್ರಮುಖ ರಾಜಕೀಯ ವ್ಯಕ್ತಿಗಳಿಂದ ಹಿಡಿದು ಸೆಲೆಬ್ರಿಟಿಗಳು ಕೂಡ ಸೆಲ್ಫಿ ತೆಗೆದುಕೊಳ್ಳೋದ್ರಲ್ಲಿ ಎಕ್ಸಪಟ್ರ್ಸ್. ಸೆಲ್ಫಿ ತೆದುಕೊಳ್ಳೋರ ಲಿಸ್ಟ್ ನಲ್ಲಿ ಪ್ರಾಣಿಗಳು ಕೂಡ ಇವೆ.
ಸೆಲ್ಫಿ ಇಡೀ ಜಗತ್ತಿನ ತುಂಬಾ ವ್ಯಾಪಿಸಿಕೊಂಡಿದೆ. ಸೆಲ್ಫಿ ಖಯಾಲಿ ಅನ್ನೋದು ಕೇವಲ ಜನಸಾಮಾನ್ಯರನಷ್ಟೇ ಆವರಿಸಿಕೊಂಡಿಲ್ಲ. ಪ್ರಧಾನಿ ಮೋದಿಯಿಂದ ಹಿಡಿದು ಸೆಲೆಬ್ರಿಟಿಗಳೆಲ್ಲಾ ಆಗಾಗೆ ಸೆಲ್ಫಿ ತೆಗೆದುಕೊಳ್ತಾರೆ. ಪ್ರಧಾನಿ ಮೋದಿ ಅವರು ಜನಸಾಮಾನ್ಯರ ಜೊತೆಗೆ ನಿಂತು ಸೆಲ್ಫಿಗೆ ಫೋಸ್ ಕೊಟ್ಟಿದ್ರು. ಸೌದಿ ಅರೇಬಿಯಾದಲ್ಲಿ ಮೋದಿ ಜೊತೆ ಸೆಲ್ಫಿ ತೆದುಕೊಳ್ಳೋಕೆ ಅನಿವಾಸಿ ಭಾರತೀಯರು ಮುಗಿಬಿದ್ದಿದ್ರು.ಕೇವಲ ಬುದ್ಧಿ ಜೀವಿಗಳು ಮಾತ್ರ ಸೆಲ್ಫಿ ತೆಗೆದುಕೊಳ್ತಾರೆ ಅಂತ ಅಂದುಕೊಂಡಿದ್ರೆ ಅದು ನಮ್ಮ ತಪ್ಪು ಕಲ್ಪನೆ. ಯಾಕಂದ್ರೆ ಸೆಲ್ಫಿ ತೆಗೆದುಕೊಳ್ಳೋ ಲಿಸ್ಟ್‍ನಲ್ಲಿ ಪ್ರಾಣಿಗಳು ಕೂಡ ಸೇರ್ಪಡೆಯಾಗುತ್ವೆ. ನೋಡಿ ಕಾಲ ಎಷ್ಟು ಬದಲಾಗಿದೆ ಅಂತ. ಕೆಲವೊಂದು ಸೆಲ್ಫಿಗಳು ಎಷ್ಟು ಅಪಾಯ ತಂದೊಡ್ಡುತ್ತವೆ ಅಂದ್ರೆ ಅದರ ಬಗ್ಗೆ ಅರವೇ ಇರಲ್ಲ. ಸೆಲ್ಫಿ ವ್ಯಾಮೋಹಕ್ಕೆ ಬಲಿಯಾದವರು ಎತ್ತರಕ್ಕೆ ಹೋಗಿ ಸೆಲ್ಫಿ ತೆಗೆದುಕೊಂಡ್ರೆ, ಮತ್ತೆ ಕೆಲವರು ತೆಗೆದುಕೊಳ್ಳೊ ಸೆಲ್ಫಿ ವಿವಾದ ಸೃಷ್ಟಿ ಮಾಡುತ್ತೆ. ಇನ್ನೂ ಕೆಲವರ ಸೆಲ್ಫಿ ಸೋ ಫನ್ನಿ ಯಾರ್ ಅಂತ ಅನಿಸುತ್ತೆ.
ಸೆಲ್ಫಿ ಕ್ರೇಜ್ ಇದ್ದವರಿಗೆ ಕೆಲವೊಂದು ವಿಷಯಗಳ ಬಗ್ಗೆ ಅರಿವಿರಬೇಕು. ಯಾಕಂದ್ರೆ ಸೆಲ್ಫಿ ತೆಗದುಕೊಳ್ಳಲು ಹೋಗಿ ಕೆಲವರು ತಮ್ಮ ಪ್ರಾಣಕ್ಕೇ ಕುತ್ತು ತಂದುಕೊಂಡ ಘಟನೆಗಳು ಕೂಡ ಸಿಗುತ್ತೆ. ಅದರಲ್ಲೂ ಅಪಾಯಕಾರಿ ಸ್ಥಳಗಳಾದ ಬೆಟ್ಟದ ತುದಿ ಹಾಗೂ ಜಲಪಾತಗಳಿಗೆ ತೆರಳಿ ಪ್ರಾಣ ಕಳೆದುಕೊಂಡವರಲ್ಲಿ ವಿದ್ಯಾರ್ಥಿಗಳೇ ಹೆಚ್ಚು. ಇಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಾನೆ ಇದೆ.ಗುಂಡಿಗೆ ಇರೋರು ತೆಗೆದುಕೊಳ್ಳೋ ಸೆಲ್ಫಿಗಳಂತು ನಿಜಕ್ಕೂ ನೋಡುಗರಿಗೆ ನಡುಕ ಹುಟ್ಟಿಸುತ್ತೆ. ಇತ್ತೀಚೆಗೆ ಚೀನಾದಲ್ಲಿ ನಿರ್ಮಾಣವಾಗ್ತಿರೋ ಗೋಲ್ಡಿನ್ ಫೈನಾನ್ಸ್ ಕಟ್ಟಡದ ನೆತ್ತಿಯಲ್ಲಿರೋ ಕ್ರೇನ್ ತುದಿಗೆ ಆ್ಯಂಜೆಲಾ ತನ್ನ ಹುಡುಗನ ಜೊತೆ ಹೋಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾಳೆ. ಈ ರೀತಿ ಕಟ್ಟಡಗಳ ಛಾವಣಿಗಳ ಅಂಚಿನಿಂದ ತೆಗೆಯೋ ಸೆಲ್ಫಿಗಳಿಗೆ ರೂಫಿಂಗ್ ಎಂದು ನಾಮಕರಣ ಮಾಡಲಾಗಿದೆ. ಈ ರೀತಿ ಸೆಲ್ಫಿ ತೆಗೆದುಕೊಳ್ಳೋರು ಸಾಕಷ್ಟು ಸಂಖ್ಯೆಯಲ್ಲಿ ಸಿಗ್ತಾರೆ. ನಿಜಕ್ಕೂ ಇವರ ಧೈರ್ಯವನ್ನ ನಾವು ಮೆಚ್ಚಲೇ ಬೇಕು. ಸೆಲ್ಫಿ ಖಯಾಲಿ ಏನೆಲ್ಲಾ ಸಮಸ್ಯೆಗಳನ್ನ ತಂದೊಡ್ಡುತ್ತೆ ಅನ್ನೋದನ್ನ ತಿಳಿದುಕೊಂಡ್ರಿ ಅಲ್ವ. ಸೋ ನಿಮಗೂ ಸೆಲ್ಫಿ ಹುಚ್ಚಿದ್ರೆ ಇನ್ಮುಂದೆ ಸ್ವಲ್ಪ ಜಾಗರೂಕತೆಯಿಂದ ಇರಿ.
Comments