ದೇವರಿಗೆ ಪೂಜೆ ಮಾಡುವಾಗ ಈ ರೀತಿಯ ತಪ್ಪುಗಳನ್ನು ಮಾಡಬೇಡಿ..!

ಯಾವುದೇ ಪೂಜೆಗೂ ಮುನ್ನ ಸೂಕ್ತ ಹಾಗೂ ಪವಿತ್ರ ವಸ್ತುಗಳನ್ನು ಮಾತ್ರವೇ ಪೂಜಿಸಿ.ನಾನಾ ದೇವರ ಪೂಜೆಗೆ ಬಳಸಲಾಗುವ ವಸ್ತುಗಳೂ ಬೇರೆ ಬೇರೆಯಾಗಿರಬಹುದು ಅಥವಾ ಸಮಾನವಾಗಿರಬಹುದು. ಕೆಲ ವಸ್ತುಗಳು ದೇವರುಗಳಿಂದ ಹರಸಲ್ಪಟ್ಟರೆ, ಮತ್ತೆ ಕೆಲವು ವಸ್ತುಗಳಿಗೆ ದೇವರು ಶಪಿಸಬಹುದು.
ಹಾಗಾಗಿ ಯಾವ ದೇವರ ಪೂಜೆ ಎಂದು ಖಚಿತಪಡಿಸಿಕೊಂಡು ಆಯಾ ವಸ್ತುಗಳಲ್ಲೇ ಪೂಜೆ ಮಾಡಿ. ಪೂಜೆಗೂ ಮೊದಲು ಯಾವ ದೇವರಿಗೆ ಯಾವ ವಸ್ತುಗಳು ಇಷ್ಟ ಎಂಬುದನ್ನು ಅರಿತುಕೊಂಡು ಆ ಪ್ರಕಾರವೇ ಪೂಜಾಗೃಹವನ್ನು ಸಿದ್ಧಪಡಿಸಿ.
ಗಣೇಶನಿಗೆ ತುಳಸಿ ಅರ್ಪಿಸಬೇಡಿ: ಗಣೇಶ ಹಾಗೂ ದೇವ ಭೈರವನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಬಳಸದಿರಿ. ಗಣೇಶನು ತುಳಸಿಯನ್ನು ಶಪಿಸಿದ್ದು ತನ್ನ ಪೂಜೆಗೆ ಎಂದಿಗೂ ಆಕೆಯನ್ನು ಆಮಂತ್ರಿಸದ ಕಾರಣ ಗಣೇಶನ ಪೂಜೆಯಲ್ಲಿ ತುಳಸಿಯನ್ನು ಇರಿಸುವ ಮೂಲಕ ಗಣೇಶನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
ಅಗರಬತ್ತಿ ಬಳಸಬೇಡಿ: ಪೂಜೆಯಲ್ಲಿ ಅಗರಬತ್ತಿಯನ್ನು ನಾವೆಲ್ಲರೂ ಬಳಸುತ್ತಾ ಬಂದಿದ್ದೇವೆ. ಪೂಜೆಯಲ್ಲಿ ಧೂಪವನ್ನು ಬಳಸಬೇಕೆಂದು ಹೇಳಲ್ಪಟ್ಟಿದೆಯೇ ಹೊರತು ಅಗರಬತ್ತಿಗಳನ್ನಲ್ಲ! ಅಗರಬತ್ತಿಯನ್ನು ಬಿದಿರಿನ ಕಡ್ಡಿಗಳಿಂದ ತಯಾರಿಸಲಾಗುತ್ತದೆ ಹಾಗೂ ಪೂಜೆಯಲ್ಲಿ ಬಿದಿರು ಅಪವಿತ್ರ ವಸ್ತು ಎಂದು ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆ. ಆದ್ದರಿಂದಲೇ ವೇದಕಾಲದಲ್ಲಿ ಹವನ, ಯಜ್ಞಗಳಲ್ಲಿ ಬಿದಿರನ್ನು ಎಂದಿಗೂ ಬಳಸಲಾಗುತ್ತಿರಲಿಲ್ಲ.
ಸ್ನಾನ ಮಾಡದೇ ತುಳಸಿ ಎಲೆಗಳನ್ನು ಕೀಳಬೇಡಿ: ತುಳಸಿದೇವಿಯ ಕೃಪೆಗೆ ಒಳಗಾಗಬೇಕಾದರೆ ತುಳಸಿ ಎಲೆಗಳನ್ನು ಕೊಯ್ಯುವವರು ಸ್ನಾನ ಮಾಡಿ ಸ್ವಚ್ಛರಾಗಿರಬೇಕು. ಮಲಿನ ಶರೀರದಿಂದ ತುಳಸಿ ಎಲೆಗಳನ್ನು ಕೊಯ್ಯುವವರರನ್ನು ತುಳಸಿದೇವಿ ಇಷ್ಟಪಡುವುದಿಲ್ಲ ಹಾಗೂ ಈ ಎಲೆಗಳನ್ನು ಪೂಜೆಯಲ್ಲಿ ಸಲ್ಲಿಸಿದರೆ ಸ್ವೀಕರಿಸುವುದೂ ಇಲ್ಲ. ಅಲ್ಲದೇ ತುಳಸಿ ಗಿಡಕ್ಕೆ ಭಾನುವಾರ ನೀರು ಹಾಕಬಾರದು.
ಕೊಳೆಯಾದ, ಹರಿದ ಬಟ್ಟೆ ತೊಡಬೇಡಿ: ಪೂಜೆಯ ಸಮಯಲ್ಲಿ ಧರಿಸುವ ಉಡುಗೆಗಳು ಸ್ವಚ್ಛವಾಗಿರಬೇಕು ಹಾಗೂ ಎಲ್ಲಿಯೂ ಹರಿದಿರಬಾರದು. ಹರಿದ ಬಟ್ಟೆಗಳು ದಾರಿದ್ರ್ಯದ ಸಂಕೇತವಾಗಿದೆ ಹಾಗೂ ದೇವರು ದಾರಿದ್ರ್ಯವನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಪೂಜೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ತಮ್ಮಲ್ಲಿರುವ ಅತ್ಯುತ್ತಮ, ಒಗೆದು ಒಪ್ಪಗೊಳಿಸಿದ ಉಡುಗೆಗಳನ್ನೇ ತೊಡಬೇಕು. ವಿಶೇಷ ಪೂಜೆಗಳಲ್ಲಿ ಹೊಸಬಟ್ಟೆಗಳನ್ನು ಧರಿಸುವುದು ಪವಿತ್ರ.
Comments