ರೈಲ್ವೆ ಪೊಲೀಸ್ ವಿಭಾಗ, ರೈಲ್ವೆ ಪ್ರೊಟೆಕ್ಷನ್ ಸ್ಪೆಷಲ್ ಫೋರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

SSLC ಹಾಗು ಯಾವುದೇ ಪದವಿ ಪಡೆದ ವಿದ್ಯಾರ್ಥಿಗಳಿಗೆ ರೈಲ್ವೆ ಇಲಾಖೆಯು ಉದ್ಯೋಗ ಅವಕಾಶವನ್ನು ನೀಡಿದೆ., ರೈಲ್ವೆ ಪೊಲೀಸ್ ವಿಭಾಗ ಹಾಗು ರೈಲ್ವೆ ಪ್ರೊಟೆಕ್ಷನ್ ಸ್ಪೆಷಲ್ ಫೋರ್ಸ್ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಪೈಕಿ 8619 ಕಾನ್ಸ್ಟೇಬಲ್ ಹುದ್ದೆ ಹಾಗು 1120 ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಮೊದಲು ಸ್ಪರ್ಧಾತ್ಮಕ ಪರೀಕ್ಷೆ ನಂತರ ದೈಹಿಕ, ಕೊನೆಯಲ್ಲಿ ದಾಖಲೆ ಪರಿಶೀಲನೆಯ ಹಂತವು ಇರುತ್ತದೆ. ಕಾನ್ಸ್ಟೇಬಲ್ ಹುದ್ದೆಗೆ ದೈಹಿಕ ಪರೀಕ್ಷೆಯಲ್ಲಿ ಪುರುಷರು 1600 ಮೀಟರ್ ಓಟವನ್ನು 5 ನಿಮಿಷ 45 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಬೇಕು, ಅಂತೆಯೇ ಮಹಿಳೆಯರು 800 ಮೀಟರ್ ಓಟವನ್ನು 3 ನಿಮಿಷ 40 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಬೇಕು.ಇನ್ನು ಸಾಮಾನ್ಯ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ 400 ರೂಪಾಯಿಗಳು ಹಾಗು SC, ST ಮಾಜಿ ಸೈನಿಕ ಅಭ್ಯರ್ಥಿಗಳಿಗೆ 250 ರೂಪಾಯಿಗಳು ಕಾನ್ಸ್ಟೇಬಲ್ ಹುದ್ದೆಗೆ ಕನಿಷ್ಠ 18 ವರ್ಷ ಹಾಗು ಗರಿಷ್ಟ 25 ವರ್ಷ ದಾಟಿರಬಾರದು. ವೇತನದ ವಿಷಯಕ್ಕೆ ಬಂದರೆ ಕಾನ್ಸ್ಟೇಬಲ್ ಹುದ್ದೆಗೆ ಇತರೆ ಎಲ್ಲ ಭತ್ಯೆಗಳು ಸೇರಿ 21700 ರೂಪಾಯಿಗಳು ಹಾಗು ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ 35400 ರುಗಳು. ಅರ್ಜಿ ಸಲ್ಲಿಕೆಗೆ ಆರಂಭದ ದಿನಾಂಕ 1 -06 -2018 ಹಾಗು ಕೊನೆಯ ದಿನಾಂಕ 30 – 06 -2018, ಅರ್ಜಿ ಸಲ್ಲಿಕೆಗೆ ಹತ್ತಿರದ ಯಾವುದೇ ಸೈಬರ್ ಕೆಫೆ ಅಥವಾ ನೀವೇ ನೇರವಾಗಿ ಕರ್ನಾಟಕ ಪೊಲೀಸ್ ವೆಬ್ಸೈಟ್ ಅಲ್ಲಿ ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ.
Comments