ಮಹಿಳೆಯನ್ನು ನುಂಗಿದ್ದ ದೈತ್ಯ ಹೆಬ್ಬಾವು..!

ಇಂಡೋನೇಶ್ಯದ ಹಳ್ಳಿಯಲ್ಲಿ ತಮ್ಮ ಹೊಲಕ್ಕೆ ಹೋಗಿದ್ದಂತಹ ಮಹಿಳೆಯೊಬ್ಬಳು ನಾಪತ್ತೆಯಾಗಿದ್ದಳು. ಮರುದಿನ ಇದೇ ಸ್ಥಳದಲ್ಲಿ ದೈತ್ಯ ಹೆಬ್ಬಾವೊಂದು ಪತ್ತೆಯಾಗಿದೆ. ಅದರ ಹೊಟ್ಟೆಯಲ್ಲಿ ನಾಪತ್ತೆಯಾಗಿದ್ದ ಮಹಿಳೆ ಪತ್ತೆಯಾಗಿದ್ದಾಳೆ.
ಇಂಡೋನೇಷ್ಯಾದ ಮುನ ದ್ವೀಪದ ಪರ್ಸಿಯಪಲ್ ಲವೇಲ ಗ್ರಾಮದಲ್ಲಿ ಪತ್ತೆಯಾದ ಸುಮಾರು 7 ಮೀಟರ್ ಉದ್ದದ ಹೆಬ್ಬಾವಿನ ಹೊಟ್ಟೆಯನ್ನು ಸೀಳಿ ನೋಡಿದಾಗ ಅದರಲ್ಲಿನಾಪತ್ತೆಯಾಗಿದ್ದ 54 ವರ್ಷದ ಮಹಿಳೆಯ ದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಮೀನಿಗೆ ಹೋದ ಮಹಿಳೆಯು ರಾತ್ರಿ ಹಿಂದಿರುಗಿ ಬರದೇ ಇದ್ದಾಗ ಸಂಬಂಧಿಕರು ಮತ್ತು ಗ್ರಾಮಸ್ಥರು ಗಾಬರಿಗೊಂಡಿದ್ದಾರೆ.. ಮಹಿಳೆ ನಾಪತ್ತೆಯಾಗಿದ್ದರಿಂದ ಹೆಬ್ಬಾವೇ ಮಹಿಳೆಯನ್ನು ನುಂಗಿರಬಹುದು ಎಂದು ಅದನ್ನು ಕೊಂದು ಸ್ಥಳೀಯರು ಹೆಬ್ಬಾವಿನ ಹೊಟ್ಟೆ ಸೀಳಿ ನೋಡಿದಾಗ ಮಹಿಳೆ ಮೃತದೇಹ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
Comments