ಲಂಚ ತೆಗೆದುಕೊಳ್ಳುತ್ತಿದ್ದ ಗ್ರಾಮಲೆಕ್ಕಿಗನಿಗೆ ಗರ ಬಿಡಿಸಿದ ಸಚಿವ ಹೆಚ್.ಡಿ ರೇವಣ್ಣ

ಭ್ರಷ್ಟಚಾರವನ್ನು ತಡೆಯಬೇಕು ಎಂದು ಎಲ್ಲಾ ಕಡೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎನ್ನುತ್ತಿದ್ದಾರೆ. ಗ್ರಾಮಲೆಕ್ಕಿಗನೊಬ್ಬ ಲಂಚ ಪಡೆಯುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸಚಿವರು ಲಂಚ ಪಡೆಯುತ್ತಿದ್ದ ವ್ಯಕ್ತಿಯನ್ನು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡ ಘಟನೆ ಹಾಸನದಲ್ಲಿ ಜರುಗಿದೆ.
ಹಾಸನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಈ ಘಟನೆಯು ನಡಿದೆ. ಹಾಸನ ತಾಲೂಕಿನ ಮಳಲಿ ಗ್ರಾಮ ಪಂಚಾಯತ್ ಗ್ರಾಮಲೆಕ್ಕಿಗನನ್ನು ಸಚಿವ ಹೆಚ್.ಡಿ.ರೇವಣ್ಣ ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಫಲಾನುಭವಿಗಳಿಗೆ ನಿವೇಶನವನ್ನು ನೀಡಲು ಲಂಚ ಪಡೆದು ಮನೆ ನೀಡದೇ ಸತಾಯಿಸುತ್ತಿದ್ದ ಎಂದು ತಿಳಿಸಲಾಗಿದೆ. ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ಅನೇಕ ಸಾರಿ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಆದರೆ ಅದಾವುದಕ್ಕೂತಲೆಕೆಡಿಸಿಕೊಳ್ಳದ ಆತ ತನ್ನ ಲಂಚದ ಆಸೆಯನ್ನು ಮುಂದುವರೆಸಿದ್ದಾನೆ. ಇದೇ ಸಮಯದಲ್ಲಿ ಇಂದು ನಡೆದ ಸಭೆಯಲ್ಲಿ ಈ ವಿಷಯ ಸಚಿವರ ಗಮನಕ್ಕೆ ಬರುತ್ತಿದ್ದ ಹಾಗೇಯೇ ಸಚಿವರು ಸಂಜೆಯೊಳಗೆ ಲಂಚದ ಹಣವನ್ನು ರೈತನಿಗೆ ವಾಪಸ್ ನೀಡಬೇಕೆಂದು ಸಚಿವರು ಗ್ರಾಮ ಲೆಕ್ಕಿಗನಿಗೆ ಸೂಚನೆಯನ್ನು ನೀಡಿದರು. ಇನ್ನು ಮುಂದೆ ಯಾವುದೇ ದೂರು ಬರದಂತೆ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.
Comments