ಸಂಜೆ ದೀಪಗಳನ್ನು ಹಚ್ಚಿದ ನಂತರ ಈ ನಿಯಮಗಳನ್ನು ತಪ್ಪದೆ ಪಾಲಿಸಿ ..!

ಸಾಮಾನ್ಯವಾಗಿ ಸಂಜೆಯ ವೇಳೆ ಮನೆಯಲ್ಲಿ ದೀಪಗಳನ್ನು ಹಚ್ಚುವುದು ಪದ್ದತಿ. ಆದರೆ ದೀಪಗಳನ್ನು ಹಚ್ಚುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ದೀಪ ಹಚ್ಚುವ ಸಮಯದಲ್ಲಿ ಮಾಡಬೇಕಾದ ಕೆಲಸಗಳು ಮತ್ತು ಮಾಡಬಾರದಂತಹ ಕೆಲಸಗಳ ಬಗ್ಗೆ ಹಿರಿಯರು ನಮಗೆ ಹೇಳುತ್ತಿರುತ್ತಲೇ ಇರುತ್ತಾರೆ. ಧರ್ಮಶಾಸ್ತ್ರಗಳಲ್ಲಿ ಹೇಳುವಂತೆ ಉಗುರು ಕಟ್ ಮಾಡುವುದು, ಅಳುವುದು, ತಲೆ ಬಾಚಿಕೊಳ್ಳುವುದು, ಮನೆ ಕ್ಲೀನ್ ಮಾಡುವುದು…ಈ ರೀತಿಯ ಕೆಲಸಗಳನ್ನು ಮಾಡಲೇ ಬಾರದು.
ದೀಪ ಹಚ್ಚುವ ಸಮಯದಲ್ಲಿ ಜ್ಯೇಷ್ಟಾ ದೇವಿಯು ಹಿಂಬಾಗಿಲಿನಲ್ಲಿಯೂ, ಲಕ್ಷ್ಮೀದೇವಿಯು ಮುಂಬಾಗಿಲಿನಲ್ಲಿಯೂ ಮನೆಯೊಳಗೆ ಪ್ರವೇಶವನ್ನು ಮಾಡುತ್ತಾಳೆ. ಆದ್ದರಿಂದ ಜ್ಯೇಷ್ಟಾ ದೇವಿಯು ಹಿಂಬಾಗಿಲಿನಲ್ಲಿ ಪ್ರವೇಶ ಮಾಡದಂತೆ ಹಿಂದಿನ ಬಾಗಿಲನ್ನು ದೀಪ ಅಚ್ಚುವ ಸಮಯದಲ್ಲಿ ಮುಚ್ಚಿರಬೇಕು. ಲಕ್ಷ್ಮೀದೇವಿಯು ಮನೆಯ ಒಳಗೆ ಪ್ರವೇಶ ಮಾಡುವಂತೆ ಮುಂಬಾಗಿಲು ತೆರೆದಿರಬೇಕು. ಮನೆಯನ್ನು ಸ್ವಚ್ಚವಾಗಿಟ್ಟುಕೊಂಡಿರಬೇಕು. ನಾವು ಕೂಡಾ ಸುಂದರವಾಗಿ ತಯಾರಾಗಿ ಅವರ ಬರುವಿಕೆಗಾಗಿ ಎದುರು ನೋಡುತ್ತಿರಬೇಕು.ಅದೇ ರೀತಿ ನಮ್ಮ ಜೀವನದಲ್ಲಿ ಬೆಳಕು ತುಂಬಲು ಲಕ್ಷ್ಮಿ ಬರುವ ಸಮಯದಲ್ಲಿ ಮನೆಯನ್ನು ಸ್ವಚ್ಚಗೊಳಿಸಿ ನಾವೂ ಸ್ವಚ್ಚವಾಗಿದ್ದರೆ ಆ ತಾಯಿಯನ್ನು ಆಹ್ವಾನಿಸಿದಲ್ಲಿ ಲಕ್ಷ್ಮೀದೇವಿಯು ಸದಾ ನಮ್ಮ ಮನೆಯಲ್ಲಿಯೇ ನೆಲಸಿರುತ್ತಾಳೆ.ಇದರಿಂದ ಮನೆಯವರಿಗೆ ಒಳಿತಾಗುತ್ತದೆ.
Comments