ಉದ್ಯೋಗ: ಕೆಎಸ್ ಆರ್ ಟಿಸಿ ಭದ್ರತ ರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ದಿಯು ನಿಗಮದಲ್ಲಿರುವ 200 ಭದ್ರತಾ ರಕ್ಷಕ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಈಗಾಗಲೇ ಆಹ್ವಾನಿಸಲಾಗಿದೆ.
ಹುದ್ದೆಗಳ ಮೀಸಲಾತಿ ವರ್ಗಿಕರಣ ವಿವರವನ್ನು ನಿಗಮದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಅದರ ಸಂಪೂರ್ಣ ವಿವರವನ್ನು ಪಡೆಯಬಹುದಾಗಿದೆ. ಜೂನ್ 20 ರಿಂದ ಜುಲೈ 16 ರ ಸಂಜೆ 5 ಗಂಟೆಯವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ಅರ್ಜಿ ಶುಲ್ಕ ಪಾವತಿಗೆ ಅಂತಿಮ ದಿನಾಂಕ 18.07.18 ರವರೆಗೆ ಅವಕಾಶವಿದೆ. ಅರ್ಜಿ ಸಲ್ಲಿಸಲು ಮತ್ತು ಆಯ್ಕೆ ವಿಧಾನಗಳ ವಿವರವಾದ ಮಾಹಿತಿ ನಿಗಮದ ವೆಬ್ ಸೈಟ್ www.ksrtcjobs.com ನಲ್ಲಿ ನೀವು ಪಡೆಯಬಹುದಾಗಿದೆ.
Comments