ಹಾವು ಕಚ್ಚಿದ ತಕ್ಷಣ ಹೀಗೆ ಮಾಡಿ ವ್ಯಕ್ತಿಯ ಜೀವ ಉಳಿಸಿ..!

ಸಾವು ಅನ್ನೋದು ಹೇಗಾದರೂ ಕೂಡ ಬರಬಹುದು. ಸಾವು ಹೀಗೆ ನಮ್ಮನ್ನ ಸಮೀಪಿಸುತ್ತದೆ ಎಂದು ಹೇಳುವುದು ಕಷ್ಟ . ಪಂಚದಾದ್ಯಂತ ಪ್ರತಿವರ್ಷ ಏನಿಲ್ಲಾ ಅಂದ್ರು ಸು.50 ಲಕ್ಷ ಜನ ಹಾವು ಕಡಿತದಿಂದ ಸಾಯುತ್ತಿದ್ದಾರೆ. ಭಾರತದಲ್ಲಿಯೇ ಸುಮಾರು ಎರಡು ಲಕ್ಷ ಜನ ಹಾವು ಕಚ್ಚುವುದರಿಂದ ಸಾವನ್ನಪ್ಪುತ್ತಾರೆ ಎಂದು ಅಂದಾಜಿಸಲಾಗಿದೆ. ನಮ್ಮ ದೇಶದಲ್ಲಿ ಸುಮಾರು 250 ಜಾತಿಯ ಹಾವುಗಳಿವೆ. ಅದರಲ್ಲಿ ಸು.52 ಜಾತಿಯ ಹಾವುಗಳು ವಿಷ ಹಾವುಗಳು. ಹಾವು ಕಚ್ಚಿದ ಮೂರು ಗಂಟೆಗಳಲ್ಲಿ ವ್ಯಕ್ತಿಯು ಸಾವನ್ನಾಪ್ಪುತ್ತಾನೆ. ಯಾವುದೇ ಚಿಕಿತ್ಸೆ ನೀಡುವುದ್ದಿದ್ದರೆ ಆ ಮೂರು ಗಂಟೆಯೊಳಗೆ ನೀಡಬೇಕಾಗುತ್ತದೆ.
ಮನುಷ್ಯನಿಗೆ ಕಚ್ಚಿರುವ ಹಾವು ವಿಷಪೂರಿತ ಹಾವೋ ಅಥವಾ ವಿಷವಿಲ್ಲದ ಹಾವೋ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅದು ಕಚ್ಚಿದ ಜಾಗದಲ್ಲಿ ಎಷ್ಟು ಕಚ್ಚಿದ ಗುರುತುಗಳಿವೆ ಎಂಬುದನ್ನು ಮೊದಲು ನೋಡಬೇಕು. ಒಂದು ಅಥವಾ ಎರಡು ಗುರುತು ಇದ್ದರೆ ಅದು ವಿಷಪೂರಿತ ಹಾವು , ಮೂರಕ್ಕಿಂತ ಹೆಚ್ಚಿದ್ದರೆ ವಿಷರಹಿತ ಹಾವು ಎಂದು ತಿಳಿದುಕೊಳ್ಳಬಹುದಾಗಿರುತ್ತದೆ. ಒಂದು ವೇಳೆ ವಿಷಪೂರಿತ ಹಾವು ಏನಾದರೂ ಕಚ್ಚಿದರೆ ಕಚ್ಚಿದ ಜಾಗದಿಂದ ವಿಷ ಶರೀರಕ್ಕೆ ಹೋಗುತ್ತದೆ ಹಾಗೆ ಅಲ್ಲಿಂದ ಹೃದಯ, ಹೃದಯದಿಂದ ಶರೀರದ ಎಲ್ಲಾ ಭಾಗಗಳಿಗೂ ಕೂಡ ಸೇರುತ್ತದೆ. ಹೀಗೆ ವಿಷ ಶರೀರದ ಎಲ್ಲಾ ಭಾಗಗಳಿಗೆ ಸೇರಲು ಮೂರು ಗಂಟೆ ಸಮಯ ತೆಗೆದುಕೊಳ್ಳಬಹುದು. ಅಷ್ಟರ ಒಳಗೆ ಆ ವ್ಯಕ್ತಿಗೆ ಚಿಕಿತ್ಸೆಯನ್ನು ನೀಡಬೇಕು. ಇಲ್ಲವಾದರೇ ಆ ವ್ಯಕ್ತಿ ಸಾವನ್ನಪ್ಪುವುದು ಖಚಿತ. ಹಾವು ಕಚ್ಚಿದ ತಕ್ಷಣ ಕಚ್ಚಿದ ಜಾಗದಿಂದ ಸ್ವಲ್ಪ ಮೇಲ್ಭಾಗದಲ್ಲಿ ಒಂದು ದಾರದಿಂದ ಗಟ್ಟಿಯಾಗಿ ಕಟ್ಟಬೇಕು. ಸೂಜಿಯಿಲ್ಲದ ಸಿರಂಜಿಯಿಂದ ಹಾವು ಕಚ್ಚಿದ ಜಾಗದಲ್ಲಿ ಇಟ್ಟು ರಕ್ತವನ್ನು ಹೊರ ತೆಗೆಯಬೇಕು. ಮೊದಲು ರಕ್ತ ಕಪ್ಪು ಬಣ್ಣದಲ್ಲಿರುತ್ತದೆ. ಅದು ಹಾವು ಕಚ್ಚಿದ ವಿಷಯುಕ್ತದಿಂದ ಕೂಡಿದ ರಕ್ತವಾಗಿರುತ್ತದೆ. ಹೀಗೆ ಎರಡು ಮೂರು ಸಾರಿ ಎಳೆಯಬೇಕು.ನಂತರ ಪ್ರಥಮ ಚಿಕಿತ್ಸೆ ಕೊಡಿಸಿ ಆದಷ್ಟು ಬೇಗ ಡಾಕ್ಟರ್ ಬಳಿ ಕರೆದುಕೊಂಡು ಹೋಗಬೇಕು. ಯಾರಿಗಾದರೂ ಹಾವು ಕಚ್ಚಿದ್ದರೆ ನೀವು ಕೂಡ ಇದೇ ರೀತಿಯಾಗಿ ಮಾಡಿ.
Comments