ಸಂದರ್ಶನಕ್ಕೆ ಹೋಗ್ತಿದ್ದೀರಾ.. ಹಾಗಾದ್ರೆ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ..!

ಸಾಮಾನ್ಯವಾಗಿ ವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕೋದು ಕಾಮನ್ ..ಕೆಲಸಕ್ಕೆ ಹೋಗಬೇಕು ಅಂದರೆ ಇಂಟರ್ ವ್ಯೂ ವನ್ನು ಅಟೆಂಡ್ ಮಾಡಬೇಕು. ಬಹಳಷ್ಟು ಜನ ತಾವು ಮಾಡುವ ಸಣ್ಣಪುಟ್ಟ ತಪ್ಪುಗಳಿಂದ ಕೈಗೆ ಸಿಕ್ಕಿರುವಂತಹ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಕೆಲವರು ಸಂದರ್ಶನದಲ್ಲಿ ತುಂಬಾ ಭಯ ಬೀಳುತ್ತಾರೆ.…ಯಾವುದೆ ಮುಂಜಾಗ್ರತೆಯಿಲ್ಲದೆ ಸಂದರ್ಶನಕ್ಕೆ ಹೊರಟು ಕಕ್ಕಾಬಿಕ್ಕಿಯಾಗುತ್ತಾರೆ. ಅದಕ್ಕೆ ಮೊದಲೇ ಒಂದಿಷ್ಟು ಟಿಪ್ಸ್ ಗಳನ್ನು ಹೇಳ್ತಿವಿ..
ಸಂದರ್ಶನಕ್ಕೆ ಹೋಗುವ ಮೊದಲು ಮಾಡಬೇಕಾದ ಸಿದ್ದತೆಗಳು:
ಭಾವ ಚಿತ್ರವಿರುವ ಗುರುತು ಚೀಟಿಗಳು , ಜೆರಾಕ್ಸ್ ಪ್ರತಿಗಳು.
ಮೂರು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು.
ರೆಸ್ಯುಮ್ ಗಳು.
ಒಳ್ಳೆಯ ಉಡುಪುಗಳನ್ನು ಧರಿಸಿರಬೇಕು.
ನಿಮ್ಮ ದೂರವಾಣಿ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳಿ.
ಆತ್ಮ ವಿಶ್ವಾಸದ ಕೊರತೆ ಬಾರದಂತೆ ನೋಡಿಕೊಳ್ಳಿ.
ಇವುಗಳನ್ನು ಗಮನದಲ್ಲಿಟ್ಟುಕೊಂಡು ಸಂದರ್ಶನವನ್ನು ಅಟೆಂಡ್ ಮಾಡಿ..ಅಲ್ ದಿ ಬೆಸ್ಟ್.
Comments