ಪ್ರಪಂಚದಲ್ಲಿ ನಿಗೂಢವಾಗಿಯೇ ಉಳಿದಿವೆ ಈ ಪ್ರದೇಶಗಳು..!
ಪ್ರಪಂಚದಲ್ಲಿ ಸಾಕಷ್ಟು ಕೂತುಹಲಕಾರಿ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿ ಪ್ರಪಂಚದಲ್ಲಿಯ ಈ ಐದು ಪ್ರದೇಶಗಳ ಚರಿತ್ರೆ ಇನ್ನೂ ನಿಗೂಢವಾಗಿಯೇ ಉಳಿದಿದೆ.ಇದರ ಹಿಂದಿರುವ ರಹಸ್ಯವನ್ನು ಇದುವರೆಗೂ ಯಾರು ಭೇದಿಸಲು ಸಾಧ್ಯವಾಗಿಲ್ಲ.
ಬರ್ಮುಡಾ ಟ್ರಯಾಂಗಲ್
ವಾಯುವ್ಯ ಅಟ್ಲಾಂಟಿಕ್ ಮಹಾ ಸಮುದ್ರದಲ್ಲಿರುವ ಬರ್ಮುಡಾ ಟ್ರಯಾಂಗಲ್ ನಿಗೂಢವಾಗಿವೆ. ಈ ಪ್ರದೇಶವನ್ನು ‘ಡೆವಿಲ್ಸ್ ಟ್ರಯಾಂಗಲ್ ‘ಎಂದು ಸಹ ಕರೆಯುತ್ತಾರೆ. ಆಕಾಶದಲ್ಲಿ ವಿಮಾನಗಳು,ಸಮುದ್ರದಲ್ಲಿ ಪ್ರಯಾಣಿಸುವ ಹಡಗುಗಳು ಬಹಳಷ್ಟು ವರ್ಷಗಳಿಂದ ಈ ಪ್ರದೇಶದಲ್ಲಿ ಕಣ್ಮರೆಯಾಗುತ್ತಿವೆ. ಹಾಗಾಗಿ ಈ ಪ್ರದೇಶವನ್ನು ಬಹಳ ಅಪಾಯಕಾರಿ ಪ್ರದೇಶವೆಂದು ಹೇಳುತ್ತಾರೆ.
ದೆಹಲಿಯ ಕಬ್ಬಿಣದ ಕಂಬ
ಕುತುಬ್ ಮಿನಾರ್ ಸಮೀಪ ಈ ಕಂಬವಿದೆ.1600 ವರ್ಷಗಳಿಂದ ಕಿಲುಬು ಹಿಡಿಯದ ಕಾರಣ ಈ ಕಂಬಕ್ಕೆ ಅತಿಮಾನುಷ ಶಕ್ತಿಯೇ ಕಾರಣವಿರಬಹುದೆಂದು ಹೇಳಲಾಗುತ್ತಿದೆ. ಈ ಕಂಬವು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು . ಈ ಕಂಬಕ್ಕೆ ಉಪಯೋಗಿಸಲಾಗಿರುವಂತಹ ಕಬ್ಬಿಣದಲ್ಲಿ ಗಂಧಕದ ಪ್ರಮಾಣ ಹೆಚ್ಚಾಗಿರುವುದರಿಂದ ಏರ್ಪಟ್ಟ ಐರನ್ ಹೈಡ್ರೋ ಫಾಸ್ಫೇಟ್ ನಿಂದಾಗಿ ಈ ಕಂಬ ತುಕ್ಕು ಹಿಡಿಯುತ್ತಿಲ್ಲವೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ದಿ ಬ್ಲಫ್
ದಕ್ಷಿಣ ಫೆಸಿಫಿಕ್ ಮಹಾ ಸಮುದ್ರದ 500 ಕಿಲೋಮೀಟರ್ ಪ್ರದೇಶದ ಬೇರೆ ಬೇರೆ ಭಾಗಗಳಲ್ಲಿ ಯಾವಾಗಲೂ ಭೀಕರ ಶಬ್ದಗಳು ಕೇಳಿಬರುತ್ತಿದ್ದು.ಈ ಹಿಂದೆ ಇಂತಹ ಶಬ್ದವನ್ನು ಕೇಳದೆ ಇರುವುದರಿಂದ ಯಾವುದೋ ಒಂದು ದೊಡ್ಡ ಪ್ರಾಣಿಯು ಶಬ್ದ ಮಾಡುತ್ತಿದೆ ಎಂದುಕೊಂಡಿದ್ದರು. ಭೂಕಂಪದಿಂದಾಗಿ ಹಿಮಪರ್ವತ ಸಿಡಿದು ಬಿದ್ದ ಕಾರಣ ಈ ರೀತಿ ಶಬ್ದ ಬರುತ್ತಿದೆಯೆಂದೂ,ಅದೇ ರೀತಿ ಎರಡು ಕಡೆಗಳಿಂದ ಇಂತಹ ವಿದ್ಯಮಾನ ನಡೆಯುತ್ತಿರುವುದರಿಂದ 500 ಕಿಲೋಮೀಟರ್ ಪ್ರದೇಶದಲ್ಲಿ ಶಬ್ಧ ಉಂಟಾಗುತ್ತಿದೆಯೆಂಬ ರಹಸ್ಯವನ್ನು ಇನ್ನೂ ಯಾರು ಭೇದಿಸಿಲ್ಲ.
ವಿಜ್ಞಾನಕ್ಕೂ ಕೂಡ ಸವಾಲಾಗಿರುವ ಈ ಸ್ಥಳಗಳು ನಿಜಕ್ಕೂ ಆಶ್ಚರ್ಯವಾಗಿರುತ್ತವೆ ಜೊತೆಗೆ ಕೆಲವೊಮ್ಮೆ ಭಯವನ್ನು ಕೂಡ ಹುಟ್ಟಿಸುತ್ತವಂತೆ ಭಾಸವಾಗುತ್ತವೆ.
Comments