ರೈಲ್ವೇ ಸ್ಟೇಷನ್ ನಲ್ಲಿ ನಮಗೆ ಕೇಳಿಸುವ ಯುವರ್ ಅಟೆನ್ಷನ್ ಪ್ಲೀಸ್…ಧ್ವನಿ ಯಾರದು ಗೊತ್ತಾ?



ರೈಲ್ವೆ ನಿಲ್ದಾಣದಲ್ಲಿ ಸಾಮಾನ್ಯವಾಗಿ ಯುವರ್ ಅಟೆನ್ಷನ್ ಪ್ಲೀಸ್… ದಯವಿಟ್ಟು ಕೇಳಿ… ಟ್ರೈನ್ ನಂಬರ್… ಸೂಪರ್ ಫಾಸ್ಟ್ ಎಕ್ಸ್ಪ್ರೆಸ್… ಇನ್ನು ಕೆಲವೇ ನಿಮಿಷಗಳಲ್ಲಿ 3 ನೇ ಫ್ಲಾಟ್ ಫಾರಂ ನಲ್ಲಿ ಬರಲಿದೆ ಎಂಬ ಅನೌನ್ಸ್ ಮೆಂಟನ್ನು ಕೇಳದೇ ಇರುವವರು ಬಹುಶ ಯಾರೂ ಅನ್ಕೊಬಹುದು.
ಆದರೆ ಈ ಅನೌನ್ಸ್ ಮೆಂಟ್ ಮಾಡುವ ಮಹಿಳೆಯ ಧ್ವನಿ ಯಾರದು ಅನ್ನೊದು ಯಾರದು ಅಂತಾ ಯಾರಿಗಾದ್ರೂ ಗೊತ್ತಾ? ಆಕೆಯ ಹೆಸರು ಸರಳಾ ಚೌದರಿ. 1982 ರಲ್ಲಿ ಸೆಂಟ್ರಲ್ ರೈಲ್ವೇ ಅನೌನ್ಸರ್ ಆಗಿ ಉದ್ಯೋಗಕ್ಕಾಗಿ ನಡೆಸುವ ಧ್ವನಿ ಪರೀಕ್ಷೆಗಾಗಿ ಸರಳಾ ಚೌದರಿಯೂ ಕೂಡ ಆಗಮಿಸಿದ್ದರು . ಇವರ ಧ್ವನಿಯನ್ನು ಕೇಳಿದ ಅಂದಿನ ಜನರಲ್ ಮ್ಯಾನೇಜರ್ ಅಶುತೋಶ್ ಬ್ಯಾನರ್ಜಿ ,ಚೌದರಿಯ ಧ್ವನಿಯನ್ನು ಮೆಚ್ಚಿಕೊಂಡು ಆ ಉದ್ಯೋಗಕ್ಕಾಗಿ ಶಿಫಾರಸ್ಸು ಮಾಡಿದರು. ಇದರಿಂದಾಗಿ ಅಂದಿನಿಂದ ಸರಳಾ ಚೌದರಿ ರೈಲ್ವೇ ಅನೌನ್ಸರ್ ಆಗಿ ಕೆಲಸಮಾಡುತ್ತಿದ್ದಾರೆ. ಸರಳಾ ಕರ್ತವ್ಯ ನಿರ್ವಹಿಸಿದ 12 ವರ್ಷಗಳ ಉದ್ಯೋಗಕ್ಕೆ ರಾಜಿನಾಮೆಯನ್ನು ನೀಡಿದ್ದಾರೆ. ಆದರೂ ಇಂದಿಗೂ ಸಹ ರೈಲ್ವೇ ಅನೌನ್ಸ್ ಮೆಂಟ್ ಗಳಲ್ಲಿ ಅವರ ಧ್ವನಿಯು ಕೇಳಿಸುತ್ತಲೇ ಇದೆ. ಸರಳಾ ಚೌದರಿ ಒಂದೇ ಸಾರಿ ತನ್ನ ಧ್ವನಿಯಲ್ಲಿ ಸಾವಿರಾರು ರೆಕಾರ್ಡ್ ಗಳನ್ನು ಮಾಡಿಕೊಟ್ಟಿದ್ದಾರೆ.
Comments