ಮನೆಯಲ್ಲಿ ನಾಯಿ ಸಾಕುತ್ತಿದ್ದೀರಾ..!ಅದಕ್ಕೂ ಮೊದಲು ಇದನ್ನೊಮ್ಮೆ ಓದಿ..

ಇನ್ನು ಮುಂದೆ ಮನೆಯಲ್ಲಿ ನಾಯಿಗಳನ್ನು ಸಾಕಬೇಕಾದರೆ ಸಾಕಷ್ಟು ರೂಲ್ಸ್ ಅಂಡ್ ರೆಗ್ಯುಲೇಷನ್ ಅನ್ನು ಫಾಲೋ ಮಾಡಬೇಕಾಗುತ್ತದೆ. ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಯಿಗಳ ಸಾಕಾಣೆಗೆ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಿ ಸೋಮವಾರ ಅಧಿಕೃತ ಆದೇಶವನ್ನು ಹೊರಡಿಸಿದೆ.
ನಾಯಿಗಳನ್ನು ಸಾಕಲು 110 ರೂ. ಶುಲ್ಕ ಪಾವತಿಸಬೇಕು.ನಂತರ ಪಾಲಿಕೆಯ ಪಶು ವೈದ್ಯರಿಂದ ಪರವಾನಗಿ ಪಡೆಯಬೇಕು. ಪರವಾನಗಿ ನಿಯಮಗಳನ್ನು ಉಲ್ಲಂಘಿಸಿದರೆ, ಒಂದು ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ. ಮಾಲೀಕರು ತಮ್ಮ ಖರ್ಚಿನಲ್ಲಿ ಮೈಕ್ರೋ ಚಿಪ್ ಅನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಪ್ರತಿ ವರ್ಷವೂ ಅಧಿಕೃತ ಶುಲ್ಕ ಪಾವತಿಸಿ ಲೈಸೆನ್ಸ್ ಅನ್ನು ನವೀಕರಿಸಿಕೊಳ್ಳಬೇಕು. ಬಹುಮಹಡಿ ಕಟ್ಟಡದ ಫ್ಲಾಟ್ ಗಳಲ್ಲಿ ವಾಸಿಸುತ್ತಿರುವವರಿಗೆ ಒಂದು ನಾಯಿ ಮಾತ್ರ ಸಾಕಲು ಅವಕಾಶವನ್ನು ನೀಡಲಾಗಿದೆ. ಸ್ವಂತ ಮನೆ ಹೊಂದಿರುವರು ಮೂರು ನಾಯಿಗಳಿಗಿಂತ ಹೆಚ್ಚು ನಾಯಿಗಳನ್ನು ಸಾಕುವಂತಿಲ್ಲ.. ಸಾರ್ವಜನಿಕ ಸ್ಥಳಗಳಲ್ಲಿ ಮಲ, ಮೂತ್ರ ಮಾಡಿಸುವಂತಿಲ್ಲ. ಒಂದೊಮ್ಮೆ ಮಾಡಿಸಿದರೆ ಮಾಲೀಕರೇ ಸ್ವಚ್ಛಗೊಳಿಸಬೇಕು. ಇಲ್ಲವಾದಲ್ಲಿ ಮೊದಲ ತಪ್ಪಿಗೆ 100 ರೂ. ಮತ್ತು ಎರಡನೇ ತಪ್ಪಿಗೆ 200 ರೂ. ದಂಡ ಕಟ್ಟಬೇಕಾಗುತ್ತದೆ.
Comments