ಬಿಎಂಟಿಸಿ ದಿನದ ಪಾಸ್ ಮಾಡಿಸಿ: ಈ ಬಂಪರ್ ಸೇವೆಯನ್ನು ಪಡೆದುಕೊಳ್ಳಿ..!

ಪೇಟಿಎಮ್ ..ಪೋನ್ ಪೇ… ಇದರಲ್ಲಿ ಸಾಮಾನ್ಯವಾಗಿ ಕ್ಯಾಷ್ ಬ್ಯಾಕ್ ತಗೋಂಡೆ ಇರ್ತೀರಾ.. ಆದರೆ ಇದೀಷಗ ಬಿಎಂಟಿಸಿಯು ಕೂಡ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ವಾಯುವಜ್ರ ಬಸ್ಸಿನಲ್ಲಿ ಪ್ರಯಾಣ ಮಾಡುವವರು ದಿನದ ಪಾಸನ್ನು ಡಿಜಿಟಲ್ ಪೇಮೆಂಟ್ ಮೂಲಕ ಪಡೆದರೆ 10 ರೂ. ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ.
ಜೂನ್ 4 ಸೋಮವಾರದಿಂದ ಡಿಜಿಟಲ್ ಫ್ಲಾಟ್ ಫಾರ್ಮ್ ಮೂಲಕ ದಿನದ ಪಾಸು ಖರೀದಿ ಮಾಡುವ ವ್ಯವಸ್ಥೆ ಜಾರಿಯಾಗಿದೆ. ಮೇ 28ರಿಂದಲೇ ಪ್ರಾಯೋಗಿಕವಾಗಿ ಇದಕ್ಕೆ ಚಾಲನೆ ಸಿಕ್ಕಿದೆ. ಅಷ್ಟೆ ಅಲ್ಲದೆ ಜನರಿಂದ ಉತ್ತಮ ಪ್ರತಿಕ್ರಿಯೆಯು ಸಿಕ್ಕಿದೆ. https://nammapass.series-5.com/ ವೆಬ್ ಸೈಟ್ ಮೂಲಕ ಜನರು ದಿನದ ಪಾಸನ್ನು ಖರೀದಿ ಮಾಡಬಹುದು. ಡಿಜಿಟಲ್ ಗೇಟ್ ವೇ ಪೇಮೆಂಟ್, ಪೋನ್ ಪೇ ಮೂಲಕ ಪಾಸು ಖರೀದಿ ಮಾಡಿದರೆ 10 ರೂ. ಕ್ಯಾಷ್ ಬ್ಯಾಕ್ ದೊರೆಯಲಿದೆ. ವೆಬ್ ಸೈಟ್ ಬಿಡುಗಡೆ ಯಾದ ದಿನ, ಜನರನ್ನು ಆಕರ್ಷಣೆ ಮಾಡಲು 10 ರೂ. ಕ್ಯಾಷ್ ಬ್ಯಾಕ್ ನೀಡಲು ಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಪಾಸು ಪಡೆಯುವ ವ್ಯವಸ್ಥೆ ಸಂಪೂರ್ಣವಾಗಿ ಕ್ಯಾಷ್ ಲೆಸ್ ಆಗಲಿದೆ. ವೆಬ್ ಸೈಟ್ ಮೂಲಕವೂ ಜನರು ದಿನದ ಪಾಸನ್ನು ಪಡೆಯಬಹುದಾಗಿದೆ. ವಾಯು ವಜ್ರ ಬಸ್ಸಿನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಜನರು ಪಾಸುಗಳನ್ನು ಪಡೆಯಬಹುದಾಗಿದೆ. ಬಿಎಂಟಿಸಿ ಪ್ರಯೋಜನವನ್ನು ನೀವು ಪಡೆದುಕೊಳ್ಳಿ.
Comments