ನೀಟ್ ಫಲಿತಾಂಶ ಪ್ರಕಟ- ಬಿಹಾರ ಮೂಲದ ಕಲ್ಪನಾ ಕುಮಾರಿ ಟಾಪರ್

2018ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಬಿಹಾರ ಮೂಲದ ಕಲ್ಪನಾ ಕುಮಾರಿ ಎಂಬುವವರು ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಕೇಂದ್ರ ಪ್ರೌಢಶಿಕ್ಷಣ ಮಂಡಳಿ ನಡೆಸಿದ್ದಂತಹ ನೀಟ್ ಪರೀಕ್ಷೆಯಲ್ಲಿಕಲ್ಪನಾ ಅವರು 720 ಅಂಕಗಳಿಗೆ 691 ಅಂಕ ಪಡೆಯುವ ಮೂಲಕ ಟಾಪರ್ ಆಗಿದ್ದಾರೆ. 690 ಅಂಕ ಪಡೆದಿರುವ ತೆಲಂಗಾಣದ ರೋಹನ್ ಪುರೋಹಿತ್ ಮತ್ತು ದೆಹಲಿಯ ಹಿಮಾಂಶು ಶರ್ಮಾ ಎರಡನೇ ರ‍್ಯಾಂಕ್ ಮತ್ತು 686 ಅಂಕ ಪಡೆದ ದೆಹಲಿಯ ಆರೋಶ್ ಧಮಿಜಾ ಹಾಗೂ ರಾಜಸ್ಥಾನದ ಫ್ರಿನ್ಸ್ ಚೌಧರಿ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ಇನ್ನು ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. 76,778 ಅಭ್ಯರ್ಥಿಗಳು ನೀಟ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಪರೀಕ್ಷೆ ಬರೆದಿದ್ದ ಸುಮಾರು 13 ಲಕ್ಷ ಅಭ್ಯರ್ಥಿಗಳ ಪೈಕಿ ಒಟ್ಟು 7.14 ಲಕ್ಷ ವಿದ್ಯಾರ್ಥಿಗಳು ನೀಟ್ ಅರ್ಹತೆಯಲ್ಲಿ . ಇದರಲ್ಲಿ ಜನರಲ್ ಕೆಟಗರಿಯಿಂದಲೇ 6.34 ಲಕ್ಷ ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ.
Comments