ಭಾರತದಲ್ಲಿ ಆತ್ಮಹತ್ಯೆ ಯತ್ನ ಇನ್ನು ಮುಂದೆ ಅಪರಾಧವಲ್ಲ..!
ಭಾರತದಲ್ಲಿ ದಿನಕ್ಕೆ ಸಾಕಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಲುತ್ತಾರೆ. ಆತ್ಮಹತ್ಯೆ ಪ್ರಯತ್ನ ಇನ್ನು ಮುಂದೆ ಭಾರತದಲ್ಲಿ ಅಪರಾಧವಲ್ಲ. ಮಾನಸಿಕ ಆರೋಗ್ಯ ಕಾಯ್ದೆ 2017ಯ ಪ್ರಕಾರ ಕೇಂದ್ರ ಆರೋಗ್ಯ ಇಲಾಖೆ ಮೇ 29ರಂದು ಈ ಅಧಿಸೂಚನೆಯನ್ನು ಹೊರಡಿಸಿದ್ದಾಗಿದೆ.
ಆತ್ಮಹತ್ಯೆ ಯತ್ನಕ್ಕೆ ಮಾನಸಿಕ ಒತ್ತಡ ಕಾರಣವಾಗಿರುತ್ತದೆ. ಹಾಗಾಗಿ ಆತ್ಮಹತ್ಯೆ ಯತ್ನವನ್ನು ಮಾನಸಿಕ ಖಾಯಿಲೆಯ ರೂಪದಲ್ಲಿ ಕಾಣಬೇಕೆ ವಿನಃ ಅಪರಾಧವಾಗಿ ಅಲ್ಲ ಎಂದು ಹೊಸ ಕಾಯ್ದೆಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ಲೋಕಸಭೆಯಲ್ಲಿ ಮಂಡಿಸಲಾಗಿದ್ದ 'ಮೆಂಟಲ್ ಹೆಲ್ತ್ ಕೇರ್ ಬಿಲ್ 2017' (ಮಾನಸಿಕ ಆರೋಗ್ಯ ಕಾಯ್ದೆ 2017) ಕಾಯ್ದೆಯು ಈ ವರ್ಷದಲ್ಲಿ ಜಾರಿಯಾಗಿದ್ದು, ಇನ್ನು ಮುಂದೆ ಆತ್ಮಹತ್ಯೆ ಯತ್ನವನ್ನು ಐಪಿಸಿ ಅಡಿಯಲ್ಲಿ ಪರಿಶೀಲನೆ ಮಾಡಲಾಗದು ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.
Comments