ಸಿಇಟಿ ರಿಸಲ್ಟ್ ಗೆ ಕ್ಷಣಗಣನೆ ಪ್ರಾರಂಭ..!
ದ್ವಿತೀಯ ಪಿಯುಸಿ ಫಲಿತಾಂಶದ ಗೊಂದಲದಿಂದ ಮೇ.26ರಂದು ಪ್ರಕಟವಾಗಬೇಕಿದ್ದಂತಹ ಫಲಿತಾಂಶ ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.
(http://kea.kar.nic.in/cet_2015.htm ಹಾಗೂ http://karresults.nic.in/) ಸೇರಿದಂತೆ ಕೆಲ ವೆಬ್ ಸೈಟ್ ಗಳಲ್ಲಿ ಮಾತ್ರ ಸಿಇಟಿ ಫಲಿತಾಂಶವನ್ನು ನೋಡಬಹುದಾಗಿದೆ. ಈ ಸಲ ಕರ್ನಾಟಕ ಸಿಇಟಿಯು ಮೇ 12 ಹಾಗೂ 13 ರಂದು ನಡೆಸಲಾಗಿದ್ದು, ಒಟ್ಟು 1,57,580 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಬೆಂಗಳೂರಿನಲ್ಲಿ 73 ಕೇಂದ್ರಗಳು ಸೇರಿದಂತೆ ರಾಜ್ಯಾದ್ಯಂತ 343 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಇದರಲ್ಲಿ 82079 ವಿದ್ಯಾ ರ್ಥಿಗಳಿದ್ದರೆ, 75501 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು.
Comments