ನಿರ್ಮಾಪಕ ಆನಂದ ಅಪ್ಪುಗೋಳ ಮನೆಗೆ ಸಾರ್ವಜನಿಕರಿಂದ ಮುತ್ತಿಗೆ..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐತಿಹಾಸಿಕ ಚಿತ್ರವಾದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ನಿರ್ಮಾಪಕರಾದ ಆನಂದ ಅಪ್ಪುಗೋಳ ಮನೆಗೆ ಸಾರ್ವಜನಿಕರು ಮುತ್ತಿಗೆ ಹಾಕಿದ್ದಾರೆ. ರಿಯಲ್ ಎಸ್ಟೇಟ್, ಸಿನಿಮಾ, ಅನೇಕ ಕಡೆಗಳಲ್ಲಿ ಸೊಸೈಟಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ವರ್ಷವೂ ಕೂಡ ಆನಂದ ಅಪ್ಪುಗೋಳ ಅವರ ಮೇಲೆ ಇದೇ ರೀತಿಯ ಆರೋಪಗಳು ಕೇಳಿ ಬಂದಿತ್ತು. ಅವರು 'ಸಂಗೊಳ್ಳಿ ರಾಯಣ್ಣ' ಹೆಸರಿನಲ್ಲಿ ಬ್ಯಾಂಕ್ ಒಂದನ್ನೂ ನಡೆಸುತ್ತಿದ್ದು, ಕಡಿಮೆ ಬಡ್ಡಿಗೆ ಜನರಿಗೆ ಹಣ ನೀಡುವುದಾಗಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಸೊಸೈಟಿಯಲ್ಲೂ ಕೂಡ ಸಾರ್ವಜನಿಕರಿಂದ ವಿವಿಧ ರೀತಿಯ ಠೇವಣಿ ಮತ್ತು ಬಾಂಡ್ ಗಳ ಮೂಲಕ ನೂರಾರು ಕೋಟಿ ಸಂಗ್ರಹ ಮಾಡಿ, ಸಂಗ್ರಹದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ಸಾರ್ವಜನಿಕರಿಗೆ ಹಣ ಪಾವತಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
Comments