ಮುಂದಿನ ವಾರದಿಂದ ‘ವಾಟ್ಸಾಪ್’ ಮನಿ ಟ್ರಾನ್ಸಾಕ್ಷನ್ ಆರಂಭ..!

ಕೇವಲ ಆನ್ ಲೈನ್ ನಲ್ಲಿ ಮಾತ್ರ ಮತ್ತು ಕೆಲವೊಂದು ಆ್ಯಫ್ ಗಳಲ್ಲಿ ಹಣವನ್ನು ಕಳುಹಿಸುವ ವ್ಯವಸ್ಥೆ ಇತ್ತು. ಫೇಸ್ಬುಕ್ ಮುಂದಿನ ವಾರ ಭಾರತದಾದ್ಯಂತ ವಾಟ್ಸಾಪ್ ಪೇಮೆಂಟ್ ಸೇವೆಯನ್ನು ಶುರು ಮಾಡ್ತಿದೆ. ಸಂದೇಶ, ಫೋಟೋ, ವಿಡಿಯೋ ಇವುಗಳ ಜೊತೆಗೆ ಮುಂದಿನ ವಾರದಿಂದ ವಾಟ್ಸಾಪ್ ಮೂಲಕವೇ ಹಣವನ್ನು ಎಲ್ಲರಿಗೂ ಕಳುಹಿಸಬಹುದಾಗಿದೆ.
ಪೇಮೆಂಟ್ ಸೇವೆ ಶುರು ಮಾಡಿ ಭಾರತದ ಡಿಜಿಟಲ್ ಪೇಮೆಂಟ್ ಮಾರ್ಕೆಟ್ ಪ್ರವೇಶ ಮಾಡಲು ವಾಟ್ಸಾಪ್ ಇದೀಗ ಮುಂದಾಗಿದೆ. ಭಾರತದ ಪೇಮೆಂಟ್ ಮಾರುಕಟ್ಟೆಯಲ್ಲಿ ಪೇಟಿಎಂ, ಗೂಗಲ್ ಪ್ಲೇ, ಮೊಬಿಕ್ವಿಕ್ ನಂತಹ ಕಂಪನಿಗಳ ಮಧ್ಯೆ ಈಗಾಗಲೇ ಸಾಕಷ್ಟು ಸ್ಪರ್ಧೆಯಿದೆ. ವಾಟ್ಸಾಪ್ ಪೇಮೆಂಟ್ ಸೇವೆ ಶುರುವಾದಲ್ಲಿ ಈ ಸ್ಪರ್ಧೆ ಇನ್ನಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ವಾಟ್ಸಾಪ್ ಪೇಮೆಂಟ್ ಬ್ಯಾಂಕಿಂಗ್ ಗಾಗಿ ಹೆಚ್ ಡಿ ಎಫ್ ಸಿ, ಐಸಿಐಸಿಐ ಹಾಗೂ ಎಕ್ಸೆಸ್ ಬ್ಯಾಂಕ್ ಜೊತೆ ಒಪ್ಪಂದವನ್ನು ಮಾಡಿಕೊಳ್ಳಲಿದೆ. ಬ್ಯಾಂಕ್ ಮೂಲಕ ನಿಮಗೆ ಸುಲಭವಾಗಿ ಹಣ ವರ್ಗಾವಣೆಯಾಗಲಿದೆ. ಎಲ್ಲ ವ್ಯವಸ್ಥೆಯೂ ಸಂಪೂರ್ಣಗೊಂಡ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರಲ್ಲಿ ಸೇರ್ಪಡೆಯಾಗಲಿದೆ.
Comments