ಕೋಳಿಗಳ ಮೂಲಕ ನಿಫಾ ವೈರಸ್ ಹರಡುತ್ತಿದೆಯಾ?
ಬಾವಲಿಗಳ ಮೂಲಕ ನಿಪಾಹ್ ವೈರಸ್ ಹರಡುತ್ತದೆ ಎಂದು ಹೇಳುತ್ತಿದ್ದರು. ಆದರೆ ಈಗ ಕೋಳಿಗಳ ಮೂಲಕ ಹರಡುತ್ತಿದೆ ಎನ್ನುವ ಸಂದೇಶಗಳು ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆಪ್ ಹಾಗು ಫೇಸ್ ಬುಕ್ ಗಳಲ್ಲಿ ಹರಿದಾಡುತ್ತಿದೆ.
ಕಲ್ಲಿಕೋಟೆ ಆರೋಗ್ಯಾಧಿಕಾರಿಯ ಹೆಸರಿನಲ್ಲಿ ಈ ಸಂದೇಶಗಳನ್ನು ರವಾನಿಸಲಾಗುತ್ತಿದೆ. ಬಾವಲಿಗಳ ಮೂಲಕ ನಿಪಾಹ್ ವೈರಸ್ ಹರಡುವುದಿಲ್ಲ ಎಂದು ಲ್ಯಾಬ್ ವರದಿಗಳು ತಿಳಿಸಿದ ನಂತರ ಇದೀಗ ನಿಪಾಹ್ ವೈರಸ್ ಗೆ ಕೋಳಿಗಳೇ ಕಾರಣ ಎನ್ನುವ ವದಂತಿ ಹೆಚ್ಚಾಗಿ ಹರಡುತ್ತಿದೆ.ಇಂತಹ ವದಂತಿಗಳು ಕಿಡಿಗೇಡಿಗಳ ಕೃತ್ಯವಾಗಿದ್ದು, ಜನರು ಈ ರೀತಿಯ ಸಂದೇಶಗಳನ್ನು ನಂಬಬಾರದು ಎಂದು ಕಲ್ಲಿಕೋಟೆ ಜಿಲ್ಲಾ ವೈದ್ಯಾಧಿಕಾರಿ ಡಾ.ವಿ. ಜಯಶ್ರೀ ಅವರು ಹೇಳಿದ್ದಾರೆ.. ಇದನ್ನು ಸಾರ್ವಜನಿಕರು ನಂಬಬಾರದು ಎಂದು ಸಹ ತಿಳಿಸಿದ್ದಾರೆ.
Comments