ನಾಳೆ ಹೊರಬೀಳಲಿದೆ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ

28 May 2018 5:01 PM | General
561 Report

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು 10 ನೇ ತರಗತಿ ಫಲಿತಾಂಶವನ್ನು ಮಂಗಳವಾರ ಅಂದರೆ ನಾಳೆ ಸಂಜೆ 4 ಗಂಟೆಗೆ ಪ್ರಕಟ ಮಾಡಲಿದೆ.

ಮಾರ್ಚ್ 5ರಿಂದ ಎಪ್ರಿಲ್ 4ರವರೆಗೆ 10ನೇ ತರಗತಿ ಪರೀಕ್ಷೆಯು ನಡೆದಿತ್ತು. 16, 38,420 ವಿದ್ಯಾರ್ಥಿಗಳು 1೦ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದು 4453 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. cbseresults.nic.in ಅಥವಾ cbse.nic.in ಅಥವಾ results.nic.in ವೆಬ್ ಸೈಟ್ ಗೆ ವಿಸಿಟ್ ಮಾಡಿ ಫಲಿತಾಂಶ ಪರಿಶೀಲಿಸಬಹುದು.

 

Edited By

Manjula M

Reported By

Manjula M

Comments