ವದಂತಿಗೆಗಳಿಗೆ ಕಿವಿಗೊಡಬೇಡಿ: ಸಾಲು ಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ- ದತ್ತು ಪುತ್ರ ಸ್ಪಷ್ಟನೆ

ಸಾಲು ಮರದ ತಿಮ್ಮಕ್ಕ ಇನ್ನಿಲ್ಲ ಎಂಬ ಸುಳ್ಳು ಸುದ್ದಿಯನ್ನು, ಯಾರೋ ಕಿಡಿಗೇಡಿಗಳು ಹಬ್ಬಿಸುತ್ತಿದ್ದಾರೆ ಎಂದು ಸಾಲು ಮರದ ತಿಮ್ಮಕ್ಕನವರ ದತ್ತುಪುತ್ರ ಉಮೇಶ್ ಅವರು ಸ್ಪಷ್ಟಪಡಿಸಿದ್ದಾರೆ.
ಸಾಲುಮರದ ತಿಮ್ಮಕ್ಕ ಅನಾರೋಗ್ಯದ ಕುರಿತು ಹರಡಿರುವ ಸುದ್ದಿಗೆ ಪ್ರತಿಕ್ರಿಯಿಸಿರುವ ದತ್ತುಪುತ್ರ ಉಮೇಶ್, ಯಾರೋ ದುಷ್ಕರ್ಮಿಗಳು ನಮ್ಮ ಕಾರಿನ ಮೇಲೆ ಕಲ್ಲು ಎಸೆದಿದ್ದರು. ನಾನು ಹಾಗೂ ಅಜ್ಜಿ ಕಾರಿನಲ್ಲಿ ಇರಲಿಲ್ಲ. ಚುನಾವಣೆ ಎಂದು ನಾವೂ ಯಾವುದೇ ದೂರು ಕೊಡಲಿಲ್ಲ. ಈಗ ನೋಡಿದರೆ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಮ್ಮ ಅಜ್ಜಿ ಬೇಲೂರಿನಲ್ಲಿ ಆರೋಗ್ಯವಾಗಿದ್ದಾರೆ, ಅವರ ಆರೋಗ್ಯ ಚೆನ್ನಾಗಿದೆ ಎಂದು ದತ್ತು ಪುತ್ರ ಉಮೇಶ್ ಸ್ಪಷ್ಟ ಪಡಿಸಿದ್ದಾರೆ.
Comments