ಮತ್ತಷ್ಟು ಗಗನಕುಸುಮವಾದ ಬಂಗಾರದ ಬೆಲೆ..!

ಹೆಣ್ಣು ಮಕ್ಕಳಿಗೆ ಚಿನ್ನ ಅಂದರೆ ಕೊಂಚ ಜಾಸ್ತಿನೆ ಇಷ್ಟ.. ಚಿನ್ನದ ಬೆಲೆ ಗಗನಕುಸುಮವಾದರೂ ತಗೋಲೋದನ್ನ ಮಾತ್ರ ಕಡಿಮೆ ಮಾಡಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಸತತವಾಗಿ ಏರಿಳಿತ ಕಂಡು ಬರುತ್ತಿದೆ. ಇದೀಗ ಮತ್ತೆಮ್ಮೆ ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ.
ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಏರಿಕೆಯಾದ ಪರಿಣಾಮ ಚಿನ್ನದ ದರದಲ್ಲಿ ಏರಿಕೆಯು ಕಂಡು ಬಂದಿದೆ. ಪ್ರತೀ 10 ಗ್ರಾಂ ಚಿನ್ನದ ದರದ ಮೇಲೆ 350 ರೂ ಏರಿಕೆ ಆಗಿರುವುದು ಕಂಡು ಬಂದಿದೆ. ಇದರಿಂದ ಪ್ರತೀ 10 ಗ್ರಾಂ ಚಿನ್ನದ ಬೆಲೆ 32,475 ರೂ ಗಳಾಗಿವೆ. ಇನ್ನು ಇದೇ ಸಂದರ್ಭದಲ್ಲಿ ಬೆಳ್ಳಿಯ ಬೆಲೆಯಲ್ಲಿಯೂ ಕೂಡ ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ.
Comments