ಲವರ್ ಅಂದ್ರೆ ಹೀಗಿರಬೇಕು ಅನ್ಸುತ್ತೆ..! ಏಕೆ ಅಂತೀರಾ…? ಇದನ್ನೊಮ್ಮೆ ಓದಿ

ಮದುವೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ವಧು-ವರರಿಗೆ ನೋಟುಗಳ ಹಾರಗಳನ್ನು ಹಾಕಿರುವುದನ್ನು ನೀವು ನೋಡಿರುತ್ತೀರಾ, ಆದರೆ ಕರೆನ್ಸಿಗಳಿಂದಲೇ ತಯಾರಿಸಿದ ಪುಷ್ಪಗುಚ್ಚ ನೋಡಿದ್ದೀರಾ..? ಮೇ ಬಿ ಇಲ್ಲ ಅನ್ನಿಸುತ್ತೆ.
ಚೀನಾದ ಮಹಾ ಪ್ರೇಮಿಯೊಬ್ಬ ತನ್ನ ಪ್ರೇಯಸಿಗೆ ಪರ್ಫೆಕ್ಟ್ ಬರ್ತ್‍ಡೇ ಗಿಫ್ಟ್ ನೀಡಲು ನಿರ್ಧರಿಸಿದ್ದಾನೆ. ಅದಕ್ಕಾಗಿ ಆತ ಸಾಕಷ್ಟು ತಲೆಯನ್ನು ಕೂಡ ಕೆಡಿಸಿಕೊಂಡಿದ್ದಾನೆ.. ಅದಕ್ಕಾಗಿ ಆತ ಏನ್ ಮಾಡಿದ್ದೇನು ಗೊತ್ತಾ? 30,000 ಯೆನ್ (ಸುಮಾರು 35.70 ಲಕ್ಷ ರೂ.ಗಳು) ಕರೆನ್ಸಿ ನೋಟಿಗಳಿಂದ ವಿನ್ಯಾಸಗೊಳಿಸಿರುವ ಅತ್ಯಂತ ದುಬಾರಿ ಮತ್ತು ವಿಶೇಷ ವಿನ್ಯಾಸವಾದ ಬೊಕ್ಕೆ ನೀಡಿ ಪ್ರೇಯಸಿಯನ್ನು ಸಿಕ್ಕಾಪಟ್ಟೆ ಖುಷಿ ಪಡಿಸಿದ್ದಾನೆ. ಹೂವಿನ ಅಂಗಡಿಯ ಸುಮಾರು ಏಳು ನೌಕರರನ್ನು ತನ್ನ ಪ್ರೇಮ ಸಂದೇಶ ಕಾರ್ಯಕ್ಕಾಗಿ ನಿಯೋಜಿಸಿಕೊಂಡಿದ್ದನು.. ಹೂವುಗಳ ಬದಲಿಗೆ ಹೊಸ ಕರೆನ್ಸಿಗಳನ್ನು ಅತ್ಯಂತ ಕಲಾತ್ಮವಾಗಿ ವಿನ್ಯಾಸಗೊಳಿಸಲು ಇವರಿಗೆ 10 ಗಂಟೆಗಳು ಬೇಕಾದವು. ಗುಲಾಬಿ ಮತ್ತು ಕಿತ್ತಳೆ ವರ್ಣಗಳ ಈ ನೋಟುಗಳು ಹೂವಿನ ಜಾಗದಲ್ಲಿ ಕಂಗೊಳಿಸುತ್ತವೆ. ಚಾಂಗ್‍ಕ್ವಿಂಗ್‍ನ ಪಂಚಾತಾರ ಹೋಟೆಲ್‍ನ ಫ್ಯಾನ್ಸಿ ರೂಮ್‍ನಲ್ಲಿ ಈ ಉಡುಗೊರೆಯನ್ನು ಪ್ರೇಯಸಿಗೆ ನೀಡಿದ್ಧಾನೆ. ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ಈ ಚಿತ್ರಗಳು ಸಖತ್ ಆಗಿಯೇ ಸುದ್ದಿ ಮಾಡುತ್ತಿವೆ.
Comments