ಟ್ವಿಟರ್ ನಲ್ಲಿ ಅರೆ ಬೆತ್ತಲೆ ಪೋಟೋ ಹಾಕಿದ ಮೈಸೂರು ಸಂಸದ ಪ್ರತಾಪ್ ಸಿಂಹ:ಕಾರಣ ಏನ್ ಗೊತ್ತಾ?

ನೆನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಫಿಟ್ನೆಸ್ ಚಾಲೆಂಜ್ ವಿಷಯ ಹರಿದಾಡುತ್ತಿದೆ. ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಹಾಕಿದ್ದ ಫಿಟ್ ನೆಸ್ ಸವಾಲನ್ನು ಮೈಸೂರಿನ ಸಂಸದ ಪ್ರತಾಪ್ ಸಿಂಹ ಕೂಡ ಸ್ವೀಕರಿಸಿದ್ದಾರೆ.
ಹಮ್ ಫಿಟ್ ಥೋ ಇಂಡಿಯಾ ಫಿಟ್ ಗಾಗಿ ಸೂಪರ್ ವರ್ಕ್ ಔಟ್ ಮಾಡಿದ ಪ್ರತಾಪ್ ಸಿಂಹ ಅವರು ತಮ್ಮ ಸದೃಢ ದೇಹದ ಫೋಟೋವೊಂದನ್ನು ಟ್ವೀಟರ್ನಲ್ಲಿ ಪೋಸ್ಟ್ ಮಾಡಿ ಫಿಟ್ ನೆಸ್ ವಿಡಿಯೋವನ್ನು ಶೀಘ್ರದಲ್ಲೇ ಅಪ್ಲೋಡ್ ಮಾಡುವುದಾಗಿ ತಿಳಿಸಿದ್ದಾರೆ. ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವರಾದ ರಾಜವರ್ಧನ್ ಸಿಂಗ್ ರಾಥೋಡ್ ಅವರು ಮೇ. 22 ರಂದು ನಾನು ಫಿಟ್ ಆದ್ರೆ ದೇಶ ಫಿಟ್ ನೀವು ನಿಮ್ಮ ಫಿಟ್ ನೆಸ್ ಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿ ಎಂದು ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ನಟ ಹೃತಿಕ್ ರೋಷನ್ ಅವರಿಗೆ ಫಿಟ್ ನೆಸ್ ಸವಾಲು ಟ್ವೀಟ್ ಮಾಡಿದ್ದರು. ಈ ಸವಾಲನ್ನು ಇನ್ನೂ ಯಾರು ಯಾರು ಸ್ವೀಕರಿಸುತ್ತಾರೋ ಎಂಬದನ್ನು ನೋಡಬೇಕು.
Comments