ಹಣ್ಣುಗಳ ಮಾರಾಟಕ್ಕೂ ಅಡ್ಡಿಯಾದ ನಿಫಾ ವೈರಸ್..!
ನಿಫಾ ವೈರಸ್... ರಾಜ್ಯದಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಈ ಸೋಂಕಿಗೆ ಒಳಗಾದವರಿಗೆ ಚಿಕಿತ್ಸೆ ಇಲ್ಲ ಎಂಬ ವಿಷಯ ಕೇಳಿ ಜನ ಬೆಚ್ಚಿಬಿದ್ದಿದ್ದಾರೆ. ಅಲ್ಲದೇ, ಕೇರಳದಲ್ಲಿ ಈ ಸೋಂಕಿಗೆ ಒಳಗಾದ 11 ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆಂಬ ವಿಷಯ ಕೂಡ ಆತಂಕ ಹೆಚ್ಚುವಂತೆ ಮಾಡಿದೆ.
ಬಾವಲಿಗಳು ತಿಂದು ಬಿಟ್ಟಿರುವ ಹಣ್ಣಿನಿಂದ ನಿಫಾ ವೈರಸ್ ಸೋಂಕು ಹರಡುತ್ತದೆ ಎಂದು ಹೇಳಲಾಗುತ್ತಿದ್ದು, ಈ ಕಾರಣಕ್ಕಾಗಿ ಸಾರ್ವಜನಿಕರು ಹಣ್ಣುಗಳನ್ನು ಖರೀದಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್ ಗಳಲ್ಲಿ ನಿಫಾ ವೈರಸ್ ಕುರಿತು ಹಲವಾರು ರೀತಿಯ ಪೋಸ್ಟ್ ಗಳು ಹರಿದಾಡುತ್ತಿವೆ. ಇದರಿಂದ ಜನ ಆತಂಕಕ್ಕಿಡಾಗಿದ್ದಾರೆ. ಹಣ್ಣುಗಳನ್ನು ಯಾರು ತೆಗೆದುಕೊಳ್ಳದೆ ಇರುವುದರಿಂದ ಈಗಾಗಲೇ ಸಂಗ್ರಹಿಸಿಟ್ಟುಕೊಂಡಿರುವ ಹಣ್ಣುಗಳು ಹಾಳಾಗುತ್ತದೆಂಬ ಚಿಂತೆ ಹಣ್ಣಿನ ವ್ಯಾಪಾರಸ್ಥರನ್ನು ಕಾಡುತ್ತಿದೆ ಎಂದು ಹೇಳಲಾಗಿದೆ.
Comments