ಕೇಂದ್ರಸರ್ಕಾರ- ನಿಫಾವೈರಾಣು ಸಾಂಕ್ರಾಮಿಕ ರೋಗವಲ್ಲ

24 May 2018 6:11 PM | General
439 Report

ನಿಫಾ ವೈರಾಣು ಕೇರಳದಲ್ಲಿ 11 ಜನರನ್ನು ಬಲಿಪಡೆದಿದೆ. ನಿಫಾ ವೈರಾಣು ಸಾಂಕ್ರಾಮಿಕ ರೋಗವಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ತಿಳಿಸಿದ್ದಾರೆ.

ಡಾಕ್ಟರನ್ನೊಳಗೊಂಡ ಕೇಂದ್ರ ತಂಡ ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿಯನ್ನು ಕೇಂದ್ರಸರ್ಕಾರ ತುಂಬಾ ಹತ್ತಿರದಿಂದಲೇ ಗಮನಿಸುತ್ತಿದೆ ಇದು ಸಾಂಕ್ರಮಿಕ ರೋಗವಲ್ಲ, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಜನರು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಅವರು ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಕೇರಳದಲ್ಲಿನ ಮಾರಣಾಂತಿಕ ವೈರಾಣುವಿಂದಾಗಿ 11 ಜನ ಮಂದಿ ಮೃತಪಟ್ಟಿದ್ದಾರೆ. ರಾಜ್ಯಕ್ಕೆ ಆಗಮಿಸುತ್ತಿರುವ ಪ್ರವಾಸಿಗರಿಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಸಲಹೆಯನ್ನು ನೀಡಲಾಗುತ್ತಿದೆ.

 

Edited By

Manjula M

Reported By

Manjula M

Comments