ಇವುಗಳಿಗೆ ಆಧಾರ್ ಲಿಂಕ್ ಅವಶ್ಯಕತೆ ಇಲ್ಲ..!

24 May 2018 4:30 PM | General
611 Report

ಇತ್ತಿಚಿಗೆ ಯಾವುದಕ್ಕೆ ಆಧಾರ್ ಲಿಂಕ್ ಮಾಡಬೇಕು ಯಾವುದಕ್ಕೆ ಮಾಡಬಾರದು ಎನ್ನುವುದೇ ಒಂದು ದೊಡ್ಡ ತಲೆನೋವಾಗಿದೆ. 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಅಗತ್ಯವಿದೆಯೇ ಎಂಬ ಬಗ್ಗೆ ಜನರಿಗೆ ಸಾಕಷ್ಟು ಗೊಂದಲಗಳಿವೆ.

ಅಷ್ಟೆ ಅಲ್ಲದೆ ಇಂಟರ್ನೆಟ್ ನಲ್ಲಿ ಸಿಗುವ ವಿಷಯಗಳು ಅಥವಾ ಗೊಂದಲಕರ ಅಪೂರ್ಣವಾದ ಮಾಹಿತಿಗಳು ಯಾವುದೇ ಸರಿಯಾದ ಸ್ಪಷ್ಟತೆಯನ್ನು ನೀಡುವುದಿಲ್ಲ. ಆಧಾರ್ ಮಾಹಿತಿ ಸೋರಿಕೆಯು ಕೂಡ ಜನರಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿದೆ. ಆಧಾರ್ ಕಾರ್ಡ್ ಅನೇಕ ಯೋಜನೆಗಳಿಗೆ ಕಡ್ದಾಯವಾಗಿ ಲಿಂಕ್ ಮಾಡಬೇಕಾದ ಅಗತ್ಯವಿಲ್ಲ. ಫೋನ್, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು,ವಿಮಾ ಯೋಜನೆ,ಪಿಂಚಣಿ ಇವುಗಳಿಗೆ ಆಧಾರ್ ಕಡ್ಡಾಯದ ಅವಶ್ಯಕತೆ ಇಲ್ಲ.

Edited By

Manjula M

Reported By

Manjula M

Comments