ರಾಜಧಾನಿಯಲ್ಲಿ ಹೆಣ್ಣುಮಕ್ಕಳ ಸೇಫ್ಟಿಗೆ ಸಿದ್ಧಗೊಂಡಿದೆ ಓಬವ್ವ ಪೊಲೀಸ್ ಪಡೆ..!

ಇತ್ತಿಚೆಗೆ ನಗರದಲ್ಲಿ ದಿನನಿತ್ಯ, ಕೊಲೆ, ಅತ್ಯಾಚಾರ, ಹೆಣ್ಣುಮಕ್ಕಳನ್ನು ಚುಡಾಯಿಸುವುದು, ರೇಗಿಸುವುದು ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳನ್ನೆಲ್ಲಾ ನಿಯಂತ್ರಿಸಲು ಓಬವ್ವ ಪಡೆ ಸಿದ್ಧಗೊಂಡಿದೆ. ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚೆನ್ನಣ್ಣನವರ್, ಓಬವ್ವ ಪಡೆ ಎಂಬ ವಿಶೇಷ ಮಹಿಳಾ ಪಡೆಯೊಂದನ್ನ ರಚನೆ ಮಾಡಿದ್ದಾರೆ.
ಕಪ್ಪು ಟೀ ಶರ್ಟ್ ಅದರ ಮೇಲೆ ಪೊಲೀಸ್ ಎಂಬ ಬರಹ, ಸೇನೆಯ ಪ್ಯಾಂಟ್, ಟೋಪಿ ಕೈಯಲ್ಲಿ ಲಾಠಿ ಹಿಡಿದು ಗಸ್ತು ತಿರುಗಲಿದ್ದಾರೆ. ಉಪ್ಪಾರ ಪೇಟೆ ಸಬ್ ಇನ್‌ಸ್ಪೆಕ್ಟರ್ ಕಾತ್ಯಾಯಿನಿ ನೇತೃತ್ವದಲ್ಲಿ 8 ಮಹಿಳಾ ಪೊಲೀಸರನ್ನು ಒಳಗೊಂಡ ಓಬವ್ವ ಪಡೆಯು ಈಗಾಗಲೇ ರಚನೆಯಾಗಿದೆ. ಮೆಜೆಸ್ಟಿಕ್, ರೈಲು ನಿಲ್ದಾಣ, ಗಾಂಧಿನಗರ ಸುತ್ತ ಮುತ್ತಲ ಪ್ರದೇಶಗಳಲ್ಲಿ ಗಸ್ತು ಆರಂಭಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯರ ಹಿತದೃಷ್ಟಿಯಿಂದ ಈ ಪಡೆಯನ್ನು ರಚಿಸಲಾಗಿದೆ.
Comments