ಎಚ್ಚರ: ರೋಹು ಮೀನು ತಿನ್ನುವ ಮೊದಲು ಇದನ್ನೊಮ್ಮೆ ಓದಿ !
ನಾನ್ ವೆಜ್ ಅಂದರೆ ಸಾಕು ಕೆಲವರು ಬಾಯಿ ಬಾಯಿ ಬಿಡ್ತಾರೆ… ನಾಲಿಗೆ ಚಪ್ಪರಿಸಿಕೊಂಡು ತಿಂತಾರೆ.. ಆದರೆ ನಾನ್ ವೆಜ್ ತಿನ್ನುವಾಗ ಕೆಲವೊಂದು ವಿಷಯಗಳನ್ನು ತಿಳಿದುಕೊಂಡಿರಬೇಕು.
ಅತ್ಯಂತ ಹೆಸರುವಾಸಿಯಾಗಿರುವ ರೋಹು ಮೀನಿನಲ್ಲಿ ಅಪಾಯಕಾರಿ ಬಹುಔಷಧಿ ಪ್ರತಿರೋಧದ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆಯಂತೆ. ಇದು ಮಾನವನ ಆರೋಗ್ಯದ ಮೇಲೆ ಗಂಭೀರ ರೀತಿಯ ಪರಿಣಾಮವನ್ನು ಬೀರುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ. ಛತ್ತೀಸ್‌ಗಢದ ರಾಯಪುರದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯಾಟಿಕ್ ಸ್ಟ್ರೆಸ್ ಮ್ಯಾನೇಜ್‌ಮೆಂಟ್ ನಡೆಸಿದ ಅಧ್ಯಯನದ ವೇಳೆ ಈ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆಯಂತೆ. ಆಸ್ಪತ್ರೆಗಳಲ್ಲಿ ತಗುಲುವ ಸೋಂಕಿಗೆ ಸಂಬಂಧಿಸಿದ ರೋಗಾಣುಗಳು ರೋಹು ಮೀನಿನಲ್ಲಿ ಇರುವುದನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಹಾಗಾಗಿ ಇನ್ನು ಮೇಲೆ ನಾನ್ ವೆಜ್ ತಿನ್ನುವಾಗ ಸ್ವಲ್ಪ ಎಚ್ಚರವಹಿಸಿ.
Comments